Tuesday, October 27, 2020

ಸಮ್ಮೇಳನೋಪಾದಿಯಲ್ಲಿ ಗಮನಸೆಳೆದ ಮಕ್ಕಳ ದಸರಾ ಕವಿಗೋಷ್ಠಿ ಮತ್ತು ಉಪನ್ಯಾಸ

ಗಮನಸೆಳೆದ  ಸಮ್ಮೇಳನೋಪಾದಿಯ ಮಕ್ಕಳ ದಸರಾ ಕವಿಗೋಷ್ಠಿ ಮತ್ತು ಉಪನ್ಯಾಸ

ಕಳೆದ ನಾಲ್ಕೈದು ತಿಂಗಳಿನಿಂದ  ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕ ಆನ್ಲೈನ್ನಲ್ಲಿ  ಮಕ್ಕಳಿಗಾಗಿ ಹಲವು ಬಗೆಯ ಸ್ಪರ್ಧೆಗಳನ್ನು ರಾಜ್ಯಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಆನ್ಲೈನ್ನಲ್ಲಿ ಆಯೋಜಿಸಿ ಯಶಸ್ವಿಯಾಗಿತ್ತು. ಶಿಶು ಗೀತೆ ,ಜನಪದ ಗೀತೆ , ಜಾನಪದ ನೃತ್ಯ, ಜಾನಪದ ಆಟಗಳ ಪರಿಚಯ ಸ್ಪರ್ಧೆ,  ಕಥೆ ಹೇಳುವ ಸ್ಪರ್ಧೆ ಆಯೋಜಿಸಿ ರಾಜ್ಯಾದ್ಯಂತ ವಿಶಿಷ್ಟ ಆನ್ಲೈನ್ ಸ್ಪರ್ಧಾ ಪರಂಪರೆಗೆ ನಾಂದಿ ಹಾಡಿತ್ತು.ಇಂದಿನ ಆಧುನಿಕ ಡಿಜಿಟಲ್ ತಂತ್ರಜ್ಞಾನವನ್ನು ಧನಾತ್ಮಕವಾಗಿ ಬಳಸಿಕೊಳ್ಳುವುದನ್ನು ಪಾಲಕರಿಗೆ ಮಕ್ಕಳಿಗೆ ತಿಳಿಯಪಡಿಸಲಾಗಿತ್ತು.
 ಪ್ರತಿ ಭಾನುವಾರ ಜಿಲ್ಲೆ ಮತ್ತು ರಾಜ್ಯದ ವಿವಿಧ ಮಕ್ಕಳಿಗೆ, ಹಿರಿಯ ಸಾಹಿತಿಗಳಿಗೆ ಶಿಕ್ಷಕರಿಗೆ  ಆಹ್ವಾನಿಸಿ ವೇದಿಕೆ ಒದಗಿಸಿ ಆನ್ಲೈನ್ ಸರಣಿ ಕಾರ್ಯಕ್ರಮ ನಿರಂತರವಾಗಿ ಮಾಡಿ  ಐನೂರಕ್ಕೂ ಹೆಚ್ಚು ಮಕ್ಕಳು, ನೂರಕ್ಕೂ ಹೆಚ್ಚು ಪಾಲಕರು ತೊಡಗಿಕೊಳ್ಳುವಂತೆ ಮಾಡಿ ಯಶಸ್ವಿಯಾಗಿತ್ತು.
ಈಗ ದಸರಾ ಸಂಭ್ರಮದ ನಿಮಿತ್ತ ಒಂಬತ್ತು ದಿನಗಳ ಕಾಲ ನಿರಂತರವಾಗಿ ಮಕ್ಕಳ ದಸರಾ ಕವಿಗೋಷ್ಠಿ ಮತ್ತು ಉಪನ್ಯಾಸ ಏರ್ಪಡಿಸಿ ಜಿಲ್ಲೆಯ ಮೂವತ್ತಕ್ಕೂ ಹೆಚ್ಚಿನ ಮಕ್ಕಳಿಗೆ ಅವಕಾಶವೊದಗಿಸಿದೆ. ಪ್ರತಿ ದಿನ ಹಲವು ಹಿರಿಯ ಸಾಹಿತಿಗಳು ಉಪನ್ಯಾಸ ನೀಡಿದ್ದಾರೆ.

ಮೋಹನ್ ಚಂದ್ರಗುತ್ತಿ , ಪ್ರತಿಭಾ ಸಾಗರ್, ರವಿರಾಜ್ ಸಾಗರ್ ,ಮಾದೇವಪ್ಪ ತಾಳಗುಂದ, ಕುಮಾರಿ ಚಿತ್ರ, ಶ್ರೀಮತಿ ಕುಮುದಾ ಸುಶೀಲ್, ಸತ್ಯನಾರಾಯಣ ಕಲಾ ಸಿಂಚನ, ರಮಾಕಾಂತ ಕೆಳದಿ, ಅಜಿತ್ ಹೆಗಡೆ ವಿಶಿಷ್ಟ ಉಪನ್ಯಾಸಕ ನೀಡಿದ್ದಾರೆ. ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ.

ಶಿವಮೊಗ್ಗದ ಎಲ್ಲಾ ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು ಕ್ರಿಯಾಶೀಲವಾಗಿ ತೊಡಗಿಕೊಂಡು ಪ್ರತಿದಿನ ಒಂದೊಂದು ತಾಲೂಕಿನಿಂದ ಕಾರ್ಯಕ್ರಮ ನೆರವೇರಿಸಿದ್ದಾರೆ.ರಾಜ್ಯದ ಬೇರೆ ಬೇರೆ ಜಿಲ್ಲೆಯ ಪ್ರತಿಭಾವಂತ ಮಕ್ಕಳು ಸಹ ಭಾಗವಹಿಸಿ ರಾಜ್ಯಾದ್ಯಂತ ಈ ಕಾರ್ಯಕ್ರಮ ಮನೆಮಾತಾಗಿದೆ. ಮಕ್ಕಳು ಮತ್ತು ಪಾಲಕರ ಸಂಭ್ರಮ ದಸರಾ ಸಂಭ್ರಮ ಕಾಲದಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮವಾಗಿ ಜಿಲ್ಲಾದ್ಯಂತ ಮನೆಮನೆ ಗಮನಸೆಳೆದಿದೆ.


No comments:

Post a Comment

ಎಪಿಗ್ರಾಫಿಯಾ ಕರ್ನಾಟಕ ಎಲ್ಲ ಶಾಸನಗಳನ್ನು ಈ ಲಿಂಕ್ ಅಲ್ಲಿ ಓದಿ

ಈ ಟೆಕ್ಸ್ಟ್ ಕ್ಲಿಕ್ ಮಾಡಿ ಲಿಂಕ್ ಪಡೆಯಿರಿ ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಕರ್ನಾಟಕ ಎಪಿಗ್ರಾಫಿಯಾ ಎಲ್ಲ ಸಂಪುಟಗಳನ್ನು ಉಚಿತವಾಗಿ ಓದಿ..