Monday, August 17, 2020

ನಮ್ಮೂರ ಜಾನಪದ ಆಟಗಳ ಪರಿಚಯ ಸ್ಪರ್ಧೆ

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ
ಜಿಲ್ಲಾ ಘಟಕ ಹಾಗೂ ಮಕ್ಕಳ ಮಂದಾರ ಪತ್ರಿಕಾ ಬಳಗ


ನಮ್ಮೂರ ಜಾನಪದ ಆಟ - ರಾಜ್ಯ ಮಟ್ಟದ ಸ್ಪರ್ಧೆ

ಪಾಲಕರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಸ್ಪರ್ಧೆ. ರಾಜ್ಯ ಮಟ್ಟದ ನೂತನ  ಸ್ಪರ್ಧೆ. ಆಕರ್ಷಕ ಬಹುಮಾನಗಳು.

ಮಕ್ಕಳೇ, ಹಾಗೂ ಪಾಲಕರೆ..ನಿಮ್ಮೂರಿನ ಜಾನಪದ ಆಟದ ಯಾವುದಾದರೂ ಒಂದು ಪ್ರಕಾರವನ್ನು ಆಯ್ದುಕೊಂಡು
ಆಟದ ಕ್ರಮ ,ನಿಯಮ, ಆಟ ಆಡುವ ಬಗೆ, ಆಟದ ಹಿನ್ನೆಲೆ , ಜಾನಪದ ಮಹತ್ವ ಇದ್ದರೆ ಅದನ್ನು ಒಳಗೊಂಡಂತೆ ಅದರಿಂದ ಆಗಬಹುದಾದ ಮಾನಸಿಕ ದೈಹಿಕ ಅನುಕೂಲಗಳ ಸಹಿತ ಮೂರರಿಂದ ನಾಲ್ಕು ನಿಮಿಷಗಳ ಕಾಲ ವಿವರಿಸುತ್ತ ವಿಡಿಯೋ ಮಾಡಬೇಕು.
ಆಟ ಆಡುತ್ತಾ , ಅಥವಾ ಆಡಿಸುತ್ತಾ ಹೇಳಲು ಗೆಳೆಯರನ್ನು , ಪಾಲಕರನ್ನು ಬಳಸಿಕೊಳ್ಳಬಹುದು.

ಆಟಕ್ಕೆ ಬೇಕಾಗುವ ಪರಿಕರ ,ಬೋರ್ಡ್ , ಮತ್ತಿತರೆ ಸಾಮಗ್ರಿ ಬಳಸಿ ಆಡುವ ಆಟವಾಗಿದ್ದರೆ ಅವುಗಳನ್ನು ಸಹ ಬಳಸಿಕೊಂಡು ವಿವರಿಸಬೇಕು. ಚಾರ್ಟ್ಗಳಲ್ಲಿ, ಡ್ರಾಯಿಂಗ್ ಸೀಟಿನಲ್ಲಿ  ಬರೆದುಕೊಂಡು ಸಹ ವಿವರಿಸಬಹುದು.

ಸ್ಪರ್ಧೆಗೆ ಆಯ್ದುಕೊಂಡ ಆಟದ ಬಗ್ಗೆ ವಿವರಣೆಯನ್ನು ಸಹ ಸಾಧ್ಯವಾದಷ್ಟು ಟೈಪಿಸಿ ವಾಟ್ಸಾಪ್ ಕಳಿಸಬೇಕು. ಅದರಲ್ಲಿ ನಿಮ್ಮ ಹೆಸರು ವಿಳಾಸ, ಫೋನ್ ನಂಬರ್ ಬರೆಯಬೇಕು.

ಪಾಲಕರ ವಿಭಾಗದ ಸ್ಪರ್ಧೆಗೆ ಭಾಗವಹಿಸುವ ಪಾಲಕರ  ಗಮನಕ್ಕೆ.
ಪಾಲಕರಿಗೆ ಪ್ರತ್ಯೇಕ ವಿಭಾಗವಿದೆ.

ಉದಾಹರಣೆ. ಹಳಗುಣಿ ಮನೆ ಆಟ, ಚೌಕಬಾರ, ಹುಲಿ ಮನೆ ಆಟ, ಗೋಲಿಆಟ, ಇನ್ನಿತರೆ ಯಾವುದೇ ಜನಪದೀಯ ಆಟ ಆಗಿರಬಹುದು.

ಒಬ್ಬರಿಗೆ ಒಂದು ಆಟದ ಬಗ್ಗೆ ಮಾತ್ರ ಸ್ಪರ್ಧೆಗೆ ಅವಕಾಶ.
ಮಕ್ಕಳ ವಿಭಾಗಕ್ಕೆ  5 ನೆ ತರಗತಿಯಿಂದ   ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ.

ಮರೆಯಾಗುತ್ತಿರುವ ಹಿಂದಿನ ಜಾನಪದ ಪರಂಪರೆಯ ಜ್ಞಾನವನ್ನು  , ಆಟದ ಬಗೆಗಳನ್ನು  ಇಂದಿನ ಮಕ್ಕಳಿಗೆ ಪರಿಚಯಿಸುವುದು ಇದರ  ಮುಖ್ಯ ಉದ್ದೇಶ. ಕೇವಲ ಸ್ಪರ್ಧೆಯ ಭಾಗವಾಗಿ ಭಾಗವಹಿಸದೆ ಭಾಗವಹಿಸುವಿಕೆಯ ಭಾಗವಾಗಿ ಭಾಗವಹಿಸಿ. ಜಾನಪದ ಪರಂಪರೆಯ ಜ್ಞಾನವನ್ನು ಎಲ್ಲರಿಗೂ ಪಸರಿಸಿ.

ಕೊನೆಯ ದಿನಾಂಕ ಆಗಸ್ಟ್ -1
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- 9980952630

ವೀಡಿಯೋಗಳನ್ನು  ಮಾಡುವಾಗ ಮೊಬೈಲನ್ನು ಅಡ್ಡವಾಗಿ ಹಿಡಿದು ವಿಡಿಯೋ ಮಾಡಿ. ಆರಂಭದಲ್ಲಿ ನಿಮ್ಮ ಹೆಸರು ಪರಿಚಯ ಇರಲಿ.  ಗುಣಮಟ್ಟ ಚೆನ್ನಾಗಿಲ್ಲದ ವಿಡಿಯೋಗಳನ್ನು , ಸೂಕ್ತ ವಿವರಣೆ ಇಲ್ಲದ ವಿಡಿಯೋಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.

ವಿಡಿಯೋವನ್ನು  ವಾಟ್ಸಪ್ ಮಾಡಿದರೆ .7975240512

ನಿಮ್ಮ
ರವಿರಾಜ್ ಸಾಗರ್.
ಸಂಪಾದಕರು
ಮಕ್ಕಳ ಮಂದಾರ
ಜಿಲ್ಲಾಧ್ಯಕ್ಷರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ.


No comments:

Post a Comment

ಎಪಿಗ್ರಾಫಿಯಾ ಕರ್ನಾಟಕ ಎಲ್ಲ ಶಾಸನಗಳನ್ನು ಈ ಲಿಂಕ್ ಅಲ್ಲಿ ಓದಿ

ಈ ಟೆಕ್ಸ್ಟ್ ಕ್ಲಿಕ್ ಮಾಡಿ ಲಿಂಕ್ ಪಡೆಯಿರಿ ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಕರ್ನಾಟಕ ಎಪಿಗ್ರಾಫಿಯಾ ಎಲ್ಲ ಸಂಪುಟಗಳನ್ನು ಉಚಿತವಾಗಿ ಓದಿ..