Saturday, August 22, 2020

ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಲ್ಲೆಯ ಅಂತರ್ಜಾಲ ತಾಣ ಲೋಕಾರ್ಪಣೆ

ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಲ್ಲೆಯ ಅಂತರ್ಜಾಲ ತಾಣ ಲೋಕಾರ್ಪಣೆ

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಲ್ಲೆಯ ಘಟಕದ ವತಿಯಿಂದ
ಅಂತರ್ಜಾಲ ತಾಣಕ್ಕೆ ಚಾಲನೆ ನೀಡಲಾಗಿದ್ದು ಡಾ.ನಾ.ಡಿಸೋಜಾ ಅವರು ಇಂದು ಸಾಗರದಲ್ಲಿ ಬಿಡುಗಡೆ ಮಾಡಿದರು. ಜಿಲ್ಲಾ  ಮಕ್ಕಳಿಗಾಗಿಯೇ ಮಕ್ಕಳ ಸಾಹಿತ್ಯ,ಕಲೆ ತಲುಪಿಸಲು ಆನ್ಲೈನ್ ತಾಣ ಪರಿಕಲ್ಪನೆ ಇದೇ ಮೊದಲ ಪ್ರಯತ್ನ.ಇಂದಿನ ತಂತ್ರಜ್ಞಾನ ಬಳಸಿ ಮಕ್ಕಳ ಸಾಹಿತ್ಯ,ಕಲೆ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಅಗತ್ಯ ಎಂದರು.ಈ ನಿಟ್ಟಿನಲ್ಲಿ ಕಾರ್ಯನಿರತ ರವಿರಾಜ್  ಶ್ರಮ ಶ್ಲಾಘನೀಯ ಎಂದರು.

ರವಿರಾಜ್ ಸಾಗರ್ ಮಂಡಗಳಲೆ ಅವರ ಅಂಕಪಟ್ಟಿ ಬಾಲ್ಯ ಕೃತಿಯನ್ನು ಸಹ ಬಿಡುಗಡೆ ಮಾಡಿದರು. 
ಮಕ್ಕಳ ಶೈಕ್ಷಣಿಕ ಸಮಸ್ಯೆಗಳು, ಮಕ್ಕಳ  ಪ್ರಶ್ನೆಗಳು ಪಾಲಕರ  ತಲ್ಲಣಗಳನ್ನು  ಒಳಗೊಂಡ ಈ ಕೃತಿ ಮಕ್ಕಳ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ಆಗಲಿ ಎಂದರು.
ಹಬ್ಬಕ್ಕೆ ಮಕ್ಕಳಿಗೆ ಮಕ್ಕಳ ಪುಸ್ತಕ ಉಡುಗೊರೆಯಾಗಿ ನೀಡಿ ಎಂದು ಕರೆ ನೀಡಿದರು.

ಇಂದು  ಮಕ್ಕಳ ಸಾಹಿತ್ಯವನ್ನ ತಂತ್ರಜ್ಞಾನ ಬಳಸಿ ತುಂಬಾ ವಿನೂತನವಾಗಿ ಆಕರ್ಷಕವಾಗಿ ತಲುಪಿಸಲಾಗುತ್ತಿರುವುದು ಸಂತೋಷದ ವಿಷಯ.ಶಿವಮೊಗ್ಗ ಜಿಲ್ಲಾ  ಮಕ್ಕಳ ಸಾಹಿತ್ಯ ಪರಿಷತ್ತು ಸಹ ಈ ಕಾರ್ಯ ಕೈಗೊಂಡಿದ್ದು ಒಳ್ಳೆಯ ಬೆಳವಣಿಗೆ. 
ಕೊರೋನ ವಿಪತ್ತಿನ ಈ ಕಾಲಘಟ್ಟದಲ್ಲಿ ಮಕ್ಕಳು ಕೇವಲ ಮೊಬೈಲ್,ಟೀವಿ ಗೀಳಿಗೆ ಅಂಟಿಕೊಂಡು ಕೂರುವ ಸಂಭವವಿದೆ.ಹಾಗಾಗಿ ಮಕ್ಕಳ ಕೈಗೆ ಉತ್ತಮ ಸಾಹಿತ್ಯ ಪುಸ್ತಕ ಕೊಡಿ.ರವಿರಾಜ ಅವರ ಅಂಕಪಟ್ಟಿ ಬಾಲ್ಯ ಕೃತಿ ,ಅವರ ಮಕ್ಕಳ ಮಂದಾರ ಪತ್ರಿಕೆ , ಮಕ್ಕಳಿಗಾಗಿ ಜಾನಪದ ಕ್ಷೇತ್ರ ಕಾರ್ಯ  ಮಕ್ಕಳಿಗಾಗಿ ನಾಟಕ ಅವರ ಹಲವು ಪ್ರಯೋಗಗಳನ್ನು ಗಮನಿಸುತ್ತಿದ್ದೇನೆ.ಅವರಿಗೆ ಯಶಸ್ಸು ಸಿಗಲಿ.ಶಿವಮೊಗ್ಗ ಜಿಲ್ಲಾ ಮಕ್ಕಳ ಪರಿಷತ್ತು ಒಳ್ಳೆಯ ಕೆಲಸ ಮಾಡುತ್ತಿದೆ  ಎಂದರು.

ಜಿಲ್ಲೆಯ ಬಾಲ ಪ್ರತಿಭೆಗಳ ಮಾಹಿತಿ, ಪರಿಷತ್ತಿನ ಕಾರ್ಯಕ್ರಮಗಳು , ಮಕ್ಕಳ ಸಾಹಿತ್ಯ ಕೃತಿಗಳು, ಜಿಲ್ಲಾ ಮಕ್ಕಳ ಸಾಹಿತಿಗಳು, ಮಕ್ಕಳ ನಾಟಕಕಾರರು , ಉತ್ತಮ ಶಾಲೆಗಳು ಮತ್ತಿತರ ಮಾಹಿತಿಗಳನ್ನು ಒಳಗೊಳ್ಳಲಿದೆ.ಈ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸಲಾಗುವುದು. ಜಿಲ್ಲಾ ಮಕ್ಕಳಿಂದ ಮಕ್ಕಳ ಬರಹಗಳ ಸಂಕಲನ, ಮಕ್ಕಳಿಂದ,ಪಾಲಕರಿಂದ ಜಾನಪದ ಅನುಸಂಧಾನ, ಕ್ಷೇತ್ರ ಕಾರ್ಯ ಮಾಡಿಸಿ ಪುಸ್ತಕ ಪ್ರಕಟಿಸುವ ಯೋಜನೆ ಹಾಕಿಕೊಂಡಿದ್ದೇವೆ
 ಎಂದು ಜಿಲ್ಲಾ ಅಧ್ಯಕ್ಷರಾದ ರವಿರಾಜ್ ಸಾಗರ್  ಮಂಡಗಳಲೆ ಅವರು ವಿವರಿಸಿದರು. 
 
  ಪರಿಷತ್ತಿನ ಕಾರ್ಯಧ್ಯಕ್ಷರಾದ ಶ್ರೀಮತಿ ಕುಮುದಾ ಸುಶೀಲ್  ಪರಿಷತ್ತಿನ ಈವರೆಗೆ ಕಾರ್ಯಕ್ರಮ ನಿರೂಪಿಸಿದರು ,ಸಂಘಟನಾ ಕಾರ್ಯದರ್ಶಿ  ಸ್ಟಾನೀ ಲೋಪೀಸ್, ಪ್ರಮೀಳಾ, ಪ್ರದೀಪ ಮಂಡಗಳಲೆ, ಬಾಲ ಪ್ರತಿಭೆ ಅಮೂಲ್ಯ  ಮತ್ತು  ಕೆಲವು ಪದಾಧಿಕಾರಿಗಳು ಹಾಜರಿದ್ದರು.

No comments:

Post a Comment

ಎಪಿಗ್ರಾಫಿಯಾ ಕರ್ನಾಟಕ ಎಲ್ಲ ಶಾಸನಗಳನ್ನು ಈ ಲಿಂಕ್ ಅಲ್ಲಿ ಓದಿ

ಈ ಟೆಕ್ಸ್ಟ್ ಕ್ಲಿಕ್ ಮಾಡಿ ಲಿಂಕ್ ಪಡೆಯಿರಿ ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಕರ್ನಾಟಕ ಎಪಿಗ್ರಾಫಿಯಾ ಎಲ್ಲ ಸಂಪುಟಗಳನ್ನು ಉಚಿತವಾಗಿ ಓದಿ..