Saturday, June 20, 2026

ಸುಳ್ಳೂರಿನಲ್ಲಿ ಜೈನ ನಿಶಿಧ ಶಾಸನ ಮತ್ತು ವೀರಗಲ್ಲು

ಸುಳ್ಳೂರಿನಲ್ಲಿ ಜೈನ ನಿಶಿಧ ಶಾಸನ ಮತ್ತು ವೀರಗಲ್ಲು .

ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸಂಬಂಧಿಸಿದ ಜೈನ ಮುನಿಗಳೊಬ್ಬರು ಸಲ್ಲೇಖನ ವ್ರತವನ್ನು ಕೈಗೊಂಡಿರುವ ಜೈನ ನಿಶಿಧ ಶಾಸನ ಸಾಗರ ತಾಲೂಕಿನ ಸುಳ್ಳೂರಿನಲ್ಲಿ ಕಂಡು ಬಂದಿದೆ. ಈ ಶಾಸನದಲ್ಲಿ ಯಾವುದೇ ಅಕ್ಷರಗಳು ಇಲ್ಲದಿರುವುದರಿಂದ ಜೈನ ಮುನಿಗಳ ಹೆಸರು, ನಿರ್ದಿಷ್ಟಕಾಲ ಉಲ್ಲೇಖ ಕಂಡುಬಂದಿಲ್ಲ. ಸುಳ್ಳೂರಿನಲ್ಲಿ ಹಿಂದೆ ಜೈನ ಮುನಿಗಳಿದ್ದು ಜೈನಬಸದಿ ಇದ್ದ ಬಗ್ಗೆ ಈ ಶಾಸನದಿಂದ ತಿಳಿಯುತ್ತದೆ ಎಂದು ಈ ಬಗ್ಗೆ ಕ್ಷೇತ್ರಕಾರ್ಯಕ್ಕೆ ಗೊಂಡಿರುವ ರವಿರಾಜ್ ಸಾಗರ್ ತಿಳಿಸಿದ್ದಾರೆ. 

ಅಲ್ಲಿಯೇ ಸಮೀಪದಲ್ಲಿ ವೀರಗಲ್ಲು ಮತ್ತು ನಾಲ್ಕು ಮಹಾಸತಿ ಕಲ್ಲುಗಳಿವೆ. 
ಚಾಲುಕ್ಯರ ಕಾಲಘಟ್ಟದ ವೀರಗಲ್ಲಿನಲ್ಲಿ ಏಳು ಸಾಲುಗಳ ಶಾಸನಪಠ್ಯ ಇದೆ. ಈ ಶಾಸನ ಸುಮಾರು 800 ವರ್ಷಗಳ ಹಳೆಯದಾಗಿದ್ದು ಎಣ್ಣೆ ಬಳಿದಿರುವುದರಿಂದ ಹಾಗೂ ಮಳೆಗೆ ಶಾಸನ ಪಠ್ಯ ಸಾಕಷ್ಟು ಅಳಿಸಿ ಹೋಗಿದೆ. ನಿಖರ ಮಾಹಿತಿಗಾಗಿ ಇನ್ನಷ್ಟು ಶೋಧ ನಡೆಯಬೇಕಿದೆ. ಪ್ರಾಚ್ಯ ಇಲಾಖೆ ಈ ಬಗ್ಗೆ ಗಮನ ಹರಿಸಬೇಕೆಂದು ಸಂಶೋಧಕರು, ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಆದ ರವಿರಾಜ್ ಸಾಗರ್ ಮಂಡಗಳಲೆ ಅವರು ಮನವಿ ಮಾಡಿದ್ದಾರೆ. 


ಇಲ್ಲಿ ಇರುವ ನಾಲ್ಕು ಮಹಾಸತಿ ಕಲ್ಲುಗಳೂ ಬೇರೆ ಬೇರೆ ಕಾಲಘಟ್ಟದವು. ಗಂಡನ ಶವಸಂಸ್ಕಾರದ ಜೊತೆಗೆ ಚಿತೆಯೇರಿ ತಮ್ಮ ಪ್ರಾಣ ತ್ಯಾಗ ಮಾಡಿದ ಮಹಿಳೆಯರ ಸತಿಸಹಾಗಮನದ ತ್ಯಾಗದ ನೆನಪಿಗೆ ಅವರ ಕುಟುಂಬದವರು ಸ್ಥಾಪಿಸಿದ್ದಾರೆ.  
ಈ ಗ್ರಾಮದ ಸುತ್ತಲಿನ ತಡಗಳಲೆ,ಸೈದೂರಲ್ಲಿ ಸಾಕಷ್ಟು ಐತಿಹಾಸಿಕ ಮೂಲಾಧಾರಗಳು ಲಭ್ಯವಿದ್ದು ಅವುಗಳು ಇನ್ನೂ ಪ್ರಕಟವಾಗಿಲ್ಲ. ಅವುಗಳ ಕುರಿತು ಹೆಚ್ಚಿನ ಸಂಶೋಧನೆ ಆಗಬೇಕು. ಈ ಊರುಗಳು ಪ್ರಾಚೀನ ಐತಿಹಾಸಿಕ ಮಾನವ ನೆಲೆಗಳಾಗಿದ್ದು ಇತಿಹಾಸ ಪುಟಗಳಲ್ಲಿ ದಾಖಲಾಗಬೇಕು ಎಂದು ಒತ್ತಾಯಿಸಿದ್ದಾರೆ.



Saturday, May 4, 2024

Thursday, October 5, 2023

ಸುಳ್ಳೂರ ಶಾಲಾ ಮಂತ್ರಿಮಂಡಲದಿಂದ ಗ್ರಾಮ ಪಂಚಾಯಿತಿಗೆ ವಿವಿಧ ಬೇಡಿಕೆಗಳ ಮನವಿ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್ಸ್ ಅಳವಡಿಕೆ ಬಗ್ಗೆ ಮನವಿ ಸಲ್ಲಿಸಲಾಯಿತು. ಸೈದುರ್ ಗ್ರಾಮ ಪಂಚಾಯಿತಿ ಪಿಡಿಒ ಲತಾರಾಣಿ , ಪಂಚಾಯತಿ ಉಪಾಧ್ಯಕ್ಷರಾದ ಶಿವಕುಮಾರ್ ಅವರು, ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು.


Monday, October 2, 2023

ಮಹಾತ್ಮ ಗಾಂಧಿ ಸ್ಮರಣೆ - ಮಕ್ಕಳಿಂದ ಕವಿಗೋಷ್ಠಿ

ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಮಕ್ಕಳಿಂದ ಮಹಾತ್ಮ ಗಾಂಧೀಜಿ ಕುರಿತು ಕವಿಗೋಷ್ಠಿ.
https://www.youtube.com/live/mYB-1A7P98k?si=wAxIUNZJv_bxzKi2

ಯೂಟ್ಯೂಬ್ ನಲ್ಲಿ ನೇರ ಪ್ರಸಾರ ವೀಕ್ಷಿಸಿ..

Tuesday, September 5, 2023

ನಿಮ್ಮ ಶಾಲೆಗಳಲ್ಲಿನ ಕಲಾಂತರ್ಗತ ಪ್ರಯೋಗಗಳು ಮತ್ತು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಕುರಿತು ಲೇಖನ ಆಹ್ವಾನ.

**ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ.* 
ಮಕ್ಕಳ ಮಂದಾರ ಬಳಗ.* 

ನೀವು ನಿಮ್ಮ ಶಾಲೆಯಲ್ಲಿ ನಡೆಸಿದ ವಿಶಿಷ್ಟ ಶೈಕ್ಷಣಿಕ ಕಲಾಂತರ್ಗತ ಪ್ರಯೋಗ, ವಿಶೇಷ ಚಟುವಟಿಕೆ, ನಿಮ್ಮ ಶಾಲಾ ಸಾಧನೆ ಕುರಿತು ಲೇಖನ ಬರೆಯಲು ಆಹ್ವಾನ...

 *ಶಿಕ್ಷಕರು ಮತ್ತು ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ,ತೊಡಗಿಕೊಂಡಿರುವವರ  ವಿಶಿಷ್ಟ ಶೈಕ್ಷಣಿಕ ಪ್ರಯೋಗಗಳನ್ನು, ನಾವಿನ್ಯ ಕಲಾಂತರ್ಗತ ಪ್ರಯೋಗಗಳನ್ನು ಗುರುತಿಸಿ ದಾಖಲಿಸುವ ಕೃತಿ ಪ್ರಕಟಣೆಗಾಗಿ* 

 *ಲೇಖನಗಳ ಆಹ್ವಾನ* .

ಆತ್ಮೀಯರೇ,


ನಿಮ್ಮ ಸರ್ಕಾರಿ ಶಾಲೆಗಳಲ್ಲಿ ನಡೆದಿರುವ ಕಲಾಂತರಗತ ಶೈಕ್ಷಣಿಕ ಪ್ರಯೋಗಗಳು ಮತ್ತು ಅವುಗಳ  ಫಲಶೃತಿಗಳ ಕುರಿತು 4-5 ಪುಟ  ಮೀರದಂತೆ  ಸೂಕ್ತವಾದ ಎರಡು ಅಥವಾ ಮೂರು ಫೋಟೋಗಳೊಂದಿಗೆ ಎಂ ಎಸ್ ವರ್ಡ್ ನುಡಿಯಲ್ಲಿ ಟೈಪಿಸಿ ಕಳುಹಿಸಿ.

ತಾವು ತಮ್ಮ ಶಾಲೆಯಲ್ಲಿ  ನಡೆಸಿದ ಯಾವುದೇ ರೀತಿಯ ಸುದೀರ್ಘ  ಕಲಾಂತರ್ಗತ ಪ್ರಯೋಗಗಳು, ನಿರ್ದಿಷ್ಟ ಶೈಕ್ಷಣಿಕ ಯೋಜನೆಗಳು, ಅವುಗಳ ಉದ್ದೇಶ, ಸ್ವರೂಪ, ಗುರಿ ಮತ್ತು ಮಕ್ಕಳ ಕಲಿಕೆಯ ಮೇಲೆ, ಶಾಲಾ ಸಬಲೀಕರಣದ ಮೇಲೆ, ಮಕ್ಕಳ ಭಾಷಾ ಕೌಶಲ ಮತ್ತು ವಿವಿಧ ಕೌಶಲಗಳ ಮೇಲೆ, ಮಕ್ಕಳ ಸಾಹಿತ್ಯ ಮತ್ತು ಸೃಜನಶೀಲತೆಯ ಮೇಲೆ  ಅವು ಬೀರಿದ ಪರಿಣಾಮಗಳನ್ನು  ಸಹ ನಿಮ್ಮ ಲೇಖನ ಒಳಗೊಂಡಿರಬೇಕು.


ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿರುವ ವಿಶಿಷ್ಟ ಶೈಕ್ಷಣಿಕ ಪ್ರಯೋಗಗಳ ಕುರಿತು   ಸಮುದಾಯಕ್ಕೆ ತಲುಪಿಸಲು ಒಂದು ಉತ್ತಮ ಕೃತಿ ಪ್ರಕಟಿಸಲು ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಹಾಗೂ ಮಕ್ಕಳ ಮಂದಾರ ಬಳಗ ನಿರ್ಧರಿಸಿದೆ.

 **ನಿಮ್ಮ ಬರಹವನ್ನು ಕಳಿಸಲು ಕೊನೆ ದಿನಾಂಕ
 *ಸೆಪ್ಟೆಂಬರ್ -25* .** 

ಕಳುಹಿಸಿ - makkalamandara@gmail.com

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ-9980952630.


ನಿಮ್ಮ
ರವಿರಾಜ್ ಸಾಗರ್.
ಜಿಲ್ಲಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ತು.

 ಶಿವಮೊಗ್ಗ.
 9980952630.

Tuesday, March 14, 2023

ಆರ್ಮೀ ತರಬೇತಿ ಶಿಬಿರಕ್ಕೆ ಆಹ್ವಾನ

ಕಳೆದ ಬಾರಿ ಯಶಸ್ವಿಯಾಗಿ ಹಲವು ವಿದ್ಯಾರ್ಥಿಗಳಿಗೆ ಮಿಲಿಟರಿ ಉದ್ಯೋಗದ  ಕನಸು  ನನಸು ಮಾಡಿದ ಮಲೆನಾಡು ಕೋಚಿಂಗ್ ಸೆಂಟರ್ ಈ ವರ್ಷ ಸಹ ಶಿಬಿರ ಆಯೋಜಿಸಿದೆ.
ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.

Tuesday, March 7, 2023

ಜಿಲ್ಲಾ ಮಟ್ಟದ ಮಕ್ಕಳ ವಿಕಾಸೋತ್ಸವ

ಮಕ್ಕಳ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಮಕ್ಕಳ ವಿಕಾಸೋತ್ಸವ ಕಾರ್ಯಕ್ರಮ ಯಶಸ್ವಿ.
130 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕದಿಂದ ವಿವಿಧ ದತ್ತಿ ಪುರಸ್ಕಾರ ಸಮಾರಂಭ ಸಹ ಏರ್ಪಡಿಸಲಾಯಿತು.
ಜಿಲ್ಲಾ ಮಟ್ಟದ ಮಕ್ಕಳ ವಿಕಾಸೋತ್ಸವದಲ್ಲಿ ಸೂರ್ಯನ ಸಂದೇಶ ಮತ್ತು ಕಲಿತವರು ಮಕ್ಕಳ ಸಾಹಿತ್ಯ ಪ್ರತಿ ಪುಸ್ತಕ ಬಿಡುಗಡೆ ಮಾಡಿದರು.

ಮಕ್ಕಳ ಬೌದ್ಧಿಕ ವಿಕಾಸಕ್ಕೆ ಮಕ್ಕಳ ಶಿಬಿರಗಳು ಹೆಚ್ಚು ಹೆಚ್ಚು ಆಯೋಜಿಸಬೇಕು. ಇಂತಹ ಶ್ರಮವನ್ನು ಹಾಕಿರುವ ಜಿಲ್ಲಾ ಅಧ್ಯಕ್ಷರಾದ ರವಿರಾಜ್ ಸಾಗರ್ ಅವರ ಶ್ರಮ ಶ್ಲಾಘನೀಯ ಎಂದು ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ತಾಲೂಕುಗಳಿಂದ 120 ಮಕ್ಕಳು ಹಾಗೂ ಆಹ್ವಾನಿತ ಜಿಲ್ಲೆ ಹಾವೇರಿಯಿಂದ 10 ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಚಿತ ಶಿವಮೊಗ್ಗ ಘಟಕ ಆಚಾಪುರದ ಮುರುಗಮಠದಲ್ಲಿ ಎರಡು ದಿನಗಳ ಕಾಲ ಮಕ್ಕಳ ವಿಕಾಸೋತ್ಸವ ಶಿಬಿರವನ್ನು  11 ರಿಂದ 18 ವಯಸ್ಸಿನ ಮಕ್ಕಳಿಗಾಗಿ ಮನೋವೈಜ್ಞಾನಿಕ ವಿಷಯವನ್ನು ಕೇಂದ್ರೀಕರಿಸಿ ಶಿಬಿರ ಆಯೋಜಿಸಿತ್ತು.

ಮೊದಲ ಬಾರಿಗೆ ಮನೋವಿಜ್ಞಾನದ ವಿಷಯವನ್ನು ಕೇಂದ್ರೀಕರಿಸಿ ಎರಡು ದಿನದ ಶಿಬಿರವನ್ನು ಏರ್ಪಡಿಸಿರುವುದು ವಿಶಿಷ್ಟವಾಗಿದೆ , ಬಾಲ ವಿಕಾಸ ಅಕಾಡೆಮಿಯಲ್ಲಿ ಸಂಪನ್ಮೂಲ  ವ್ಯಕ್ತಿಯಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ರವಿರಾಜ್ ಸಾಗರ್ ಮಕ್ಕಳಿಗೆ ವಿನೂತನ ವಿಷಯವನ್ನು ಕೇಂದ್ರೀಕರಿಸಿ ಶಿಬಿರ ಆಯೋಜಿಸುತ್ತಿರುವುದು ಸಂತಸ ತಂದಿದೆ ಎಂದು
ಬಾಲ ವಿಕಾಸ ಅಕಾಡೆಮಿಯ ಯೋಜನಾಧಿಕಾರಿಗಳಾದ ಭಾರತಿ ಶೆಟ್ಟರ್  ನುಡಿದರು. 

ಇದೇ ಸಂದರ್ಭದಲ್ಲಿ  ಮಕ್ಕಳ ಕಥಾ ಸ್ಪರ್ಧೆಯ ಆಯ್ದ ಕಥೆಗಳ ಸಂಕಲನ ಸೂರ್ಯನ ಸಂದೇಶ,
ಹಾಗೂ ರವಿರಾಜ್ ಸಾಗರ್ ಅವರ ಮಕ್ಕಳ ನಾಟಕ ಕಲಿತವರು ಮತ್ತು ಇತರ ಮಕ್ಕಳ ನಾಟಕಗಳು ಕೃತಿ ಬಿಡುಗಡೆ ಮಾಡಲಾಯಿತು.

ಮಕ್ಕಳ ಬುದ್ಧಿಶಕ್ತಿ, ಗ್ರಹಿಕೆ ಅವಧಾನ, ಸೃಜನಶೀಲತೆ ಮತ್ತು ಕಲ್ಪನಾಶೀಲತೆ ವಿಷಯ ಕೇಂದ್ರೀಕರಿಸಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಈ ವಿಕಾಸೋತ್ಸವ ಮಕ್ಕಳ ಅರಿವಿನ ಉತ್ಸವ ಆಗಿದೆ ಎಂದು ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರವಿರಾಜ್ ಸಾಗರ್ ಪ್ರಸ್ತಾವಿಕ ಮಾತುಗಳಲ್ಲಿ ತಿಳಿಸಿದರು.

ನವಚೇತನ ವೇದಿಕೆ ಅಧ್ಯಕ್ಷ ಪ್ರಶಾಂತ್ ಕೆಎಸ್ ಮಕ್ಕಳಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಾಹಿತ್ಯ ಪರಿಷತ್ತಿನ ಕೆಲಸ ಶ್ಲಾಘನೀಯ ಎಂದರು.


ದಾರವಾಡದ ಮಕ್ಕಳ ಸಾಹಿತಿ ವೈ ಜಿ ಭಗವತಿ, ಶಿವಮೊಗ್ಗದ ಕ್ರಿಯಾಶೀಲ ಶಿಕ್ಷಕಿ ಅಕ್ತರ್ ಭಾನು ಅವರಿಗೆ ಮಕ್ಕಳ ಮಂದಾರ ಪುರಸ್ಕಾರ ನೀಡಿ ಗೌರವಿಸಲಾಯಿತು.

ತಾಲೂಕು ಅಧ್ಯಕ್ಷರಾದ ಕಿಶೋರ್ ಕುಮಾರ್, ಹಾವೇರಿ ಜಿಲ್ಲಾಧ್ಯಕ್ಷ ವೆಂಕಟೇಶ್  ಉಪಸ್ಥಿತರಿದ್ದರು.

 ಕಾರ್ಯದರ್ಶಿಗಳಾದ ಕುಮುದಾ ಸುಶೀಲ್ ಪಂಚಮಿ ಸಾಗರ್,  ವಿದ್ಯಾಸಿಂಗ್ ,ಉಷಾ ಜಿಎ , ಶೇಖರಪ್ಪ ಕೋಳೂರು ಕಾರ್ಯಕ್ರಮ ನಿರ್ವಹಿಸಿದರು.

ಸುಳ್ಳೂರಿನಲ್ಲಿ ಜೈನ ನಿಶಿಧ ಶಾಸನ ಮತ್ತು ವೀರಗಲ್ಲು

ಸುಳ್ಳೂರಿನಲ್ಲಿ ಜೈನ ನಿಶಿಧ ಶಾಸನ ಮತ್ತು ವೀರಗಲ್ಲು . ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸಂಬಂಧಿಸಿದ ಜೈನ ಮುನಿಗಳೊಬ್ಬರು ಸಲ್ಲೇಖನ ವ್ರತವನ್ನು ಕೈಗೊಂಡಿರುವ ಜೈ...