Saturday, June 20, 2026

ಸುಳ್ಳೂರಿನಲ್ಲಿ ಜೈನ ನಿಶಿಧ ಶಾಸನ ಮತ್ತು ವೀರಗಲ್ಲು

ಸುಳ್ಳೂರಿನಲ್ಲಿ ಜೈನ ನಿಶಿಧ ಶಾಸನ ಮತ್ತು ವೀರಗಲ್ಲು .

ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸಂಬಂಧಿಸಿದ ಜೈನ ಮುನಿಗಳೊಬ್ಬರು ಸಲ್ಲೇಖನ ವ್ರತವನ್ನು ಕೈಗೊಂಡಿರುವ ಜೈನ ನಿಶಿಧ ಶಾಸನ ಸಾಗರ ತಾಲೂಕಿನ ಸುಳ್ಳೂರಿನಲ್ಲಿ ಕಂಡು ಬಂದಿದೆ. ಈ ಶಾಸನದಲ್ಲಿ ಯಾವುದೇ ಅಕ್ಷರಗಳು ಇಲ್ಲದಿರುವುದರಿಂದ ಜೈನ ಮುನಿಗಳ ಹೆಸರು, ನಿರ್ದಿಷ್ಟಕಾಲ ಉಲ್ಲೇಖ ಕಂಡುಬಂದಿಲ್ಲ. ಸುಳ್ಳೂರಿನಲ್ಲಿ ಹಿಂದೆ ಜೈನ ಮುನಿಗಳಿದ್ದು ಜೈನಬಸದಿ ಇದ್ದ ಬಗ್ಗೆ ಈ ಶಾಸನದಿಂದ ತಿಳಿಯುತ್ತದೆ ಎಂದು ಈ ಬಗ್ಗೆ ಕ್ಷೇತ್ರಕಾರ್ಯಕ್ಕೆ ಗೊಂಡಿರುವ ರವಿರಾಜ್ ಸಾಗರ್ ತಿಳಿಸಿದ್ದಾರೆ. 

ಅಲ್ಲಿಯೇ ಸಮೀಪದಲ್ಲಿ ವೀರಗಲ್ಲು ಮತ್ತು ನಾಲ್ಕು ಮಹಾಸತಿ ಕಲ್ಲುಗಳಿವೆ. 
ಚಾಲುಕ್ಯರ ಕಾಲಘಟ್ಟದ ವೀರಗಲ್ಲಿನಲ್ಲಿ ಏಳು ಸಾಲುಗಳ ಶಾಸನಪಠ್ಯ ಇದೆ. ಈ ಶಾಸನ ಸುಮಾರು 800 ವರ್ಷಗಳ ಹಳೆಯದಾಗಿದ್ದು ಎಣ್ಣೆ ಬಳಿದಿರುವುದರಿಂದ ಹಾಗೂ ಮಳೆಗೆ ಶಾಸನ ಪಠ್ಯ ಸಾಕಷ್ಟು ಅಳಿಸಿ ಹೋಗಿದೆ. ನಿಖರ ಮಾಹಿತಿಗಾಗಿ ಇನ್ನಷ್ಟು ಶೋಧ ನಡೆಯಬೇಕಿದೆ. ಪ್ರಾಚ್ಯ ಇಲಾಖೆ ಈ ಬಗ್ಗೆ ಗಮನ ಹರಿಸಬೇಕೆಂದು ಸಂಶೋಧಕರು, ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಆದ ರವಿರಾಜ್ ಸಾಗರ್ ಮಂಡಗಳಲೆ ಅವರು ಮನವಿ ಮಾಡಿದ್ದಾರೆ. 


ಇಲ್ಲಿ ಇರುವ ನಾಲ್ಕು ಮಹಾಸತಿ ಕಲ್ಲುಗಳೂ ಬೇರೆ ಬೇರೆ ಕಾಲಘಟ್ಟದವು. ಗಂಡನ ಶವಸಂಸ್ಕಾರದ ಜೊತೆಗೆ ಚಿತೆಯೇರಿ ತಮ್ಮ ಪ್ರಾಣ ತ್ಯಾಗ ಮಾಡಿದ ಮಹಿಳೆಯರ ಸತಿಸಹಾಗಮನದ ತ್ಯಾಗದ ನೆನಪಿಗೆ ಅವರ ಕುಟುಂಬದವರು ಸ್ಥಾಪಿಸಿದ್ದಾರೆ.  
ಈ ಗ್ರಾಮದ ಸುತ್ತಲಿನ ತಡಗಳಲೆ,ಸೈದೂರಲ್ಲಿ ಸಾಕಷ್ಟು ಐತಿಹಾಸಿಕ ಮೂಲಾಧಾರಗಳು ಲಭ್ಯವಿದ್ದು ಅವುಗಳು ಇನ್ನೂ ಪ್ರಕಟವಾಗಿಲ್ಲ. ಅವುಗಳ ಕುರಿತು ಹೆಚ್ಚಿನ ಸಂಶೋಧನೆ ಆಗಬೇಕು. ಈ ಊರುಗಳು ಪ್ರಾಚೀನ ಐತಿಹಾಸಿಕ ಮಾನವ ನೆಲೆಗಳಾಗಿದ್ದು ಇತಿಹಾಸ ಪುಟಗಳಲ್ಲಿ ದಾಖಲಾಗಬೇಕು ಎಂದು ಒತ್ತಾಯಿಸಿದ್ದಾರೆ.



ಸುಳ್ಳೂರಿನಲ್ಲಿ ಜೈನ ನಿಶಿಧ ಶಾಸನ ಮತ್ತು ವೀರಗಲ್ಲು

ಸುಳ್ಳೂರಿನಲ್ಲಿ ಜೈನ ನಿಶಿಧ ಶಾಸನ ಮತ್ತು ವೀರಗಲ್ಲು . ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸಂಬಂಧಿಸಿದ ಜೈನ ಮುನಿಗಳೊಬ್ಬರು ಸಲ್ಲೇಖನ ವ್ರತವನ್ನು ಕೈಗೊಂಡಿರುವ ಜೈ...