ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ
- Home
- ನಮ್ಮ ಜಿಲ್ಲಾ ಪದಾಧಿಕಾರಿಗಳು
- ನಮ್ಮ ಕಾರ್ಯಕ್ರಮಗಳು
- ರಾಜ್ಯಮಟ್ಟದ ಕಾರ್ಯಕ್ರಮಗಳು
- ಆನ್ಲೈನ್ ಸ್ಪರ್ಧೆಗಳು
- ಲೈವ್ ಕಾರ್ಯಕ್ರಮಗಳು
- ಶಿವಮೊಗ್ಗ ಜಿಲ್ಲಾ ಬಾಲ ಪ್ರತಿಭೆಗಳು
- ಶಿವಮೊಗ್ಗ ಜಿಲ್ಲಾ ಮಕ್ಕಳ ಸಾಹಿತಿಗಳು
- ಬಾಲ ಸಾಧಕರು
- ಮಕ್ಕಳ ಬರಹಗಳು
- ಮಕ್ಕಳ ಕತೆ /ಕವನಗಳು
- ಮಕ್ಕಳು ಬಿಡಿಸಿದ ಚಿತ್ರಗಳು
- ಮಕ್ಕಳ ಸಾಹಿತ್ಯ ಪುಸ್ತಕ ಪರಿಚಯ
- ನಮ್ಮ ಮುಂದಿನ ಕಾರ್ಯಯೋಜನೆಗಳು
- ನಮ್ಮ ಕಾರ್ಯಕ್ರಮಗಳ ಪೋಟೋ ಗ್ಯಾಲರಿ
- ವೀಡಿಯೋಗಳು
- ಜಿಲ್ಲಾ ಸಾಹಿತಿಗಳು ಮತ್ತು ಮಕ್ಕಳ ಸಂಘಟನೆಗಳು
- ನಮ್ಮ ರಾಜ್ಯಘಟಕ
- ಮಕ್ಕಳ ಮಂದಾರ
- ಸಾಗರ
- ಸೊರಬ
- ಹೊಸನಗರ
- ತೀರ್ಥಹಳ್ಳಿ
- ಶಿವಮೊಗ್ಗ
- ಭದ್ರಾವತಿ
Thursday, October 5, 2023
ಸುಳ್ಳೂರ ಶಾಲಾ ಮಂತ್ರಿಮಂಡಲದಿಂದ ಗ್ರಾಮ ಪಂಚಾಯಿತಿಗೆ ವಿವಿಧ ಬೇಡಿಕೆಗಳ ಮನವಿ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್ಸ್ ಅಳವಡಿಕೆ ಬಗ್ಗೆ ಮನವಿ ಸಲ್ಲಿಸಲಾಯಿತು. ಸೈದುರ್ ಗ್ರಾಮ ಪಂಚಾಯಿತಿ ಪಿಡಿಒ ಲತಾರಾಣಿ , ಪಂಚಾಯತಿ ಉಪಾಧ್ಯಕ್ಷರಾದ ಶಿವಕುಮಾರ್ ಅವರು, ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು.
Monday, October 2, 2023
ಮಹಾತ್ಮ ಗಾಂಧಿ ಸ್ಮರಣೆ - ಮಕ್ಕಳಿಂದ ಕವಿಗೋಷ್ಠಿ
ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಮಕ್ಕಳಿಂದ ಮಹಾತ್ಮ ಗಾಂಧೀಜಿ ಕುರಿತು ಕವಿಗೋಷ್ಠಿ.
Tuesday, September 5, 2023
ನಿಮ್ಮ ಶಾಲೆಗಳಲ್ಲಿನ ಕಲಾಂತರ್ಗತ ಪ್ರಯೋಗಗಳು ಮತ್ತು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಕುರಿತು ಲೇಖನ ಆಹ್ವಾನ.
**ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ.*
ಮಕ್ಕಳ ಮಂದಾರ ಬಳಗ.*
ನೀವು ನಿಮ್ಮ ಶಾಲೆಯಲ್ಲಿ ನಡೆಸಿದ ವಿಶಿಷ್ಟ ಶೈಕ್ಷಣಿಕ ಕಲಾಂತರ್ಗತ ಪ್ರಯೋಗ, ವಿಶೇಷ ಚಟುವಟಿಕೆ, ನಿಮ್ಮ ಶಾಲಾ ಸಾಧನೆ ಕುರಿತು ಲೇಖನ ಬರೆಯಲು ಆಹ್ವಾನ...
*ಶಿಕ್ಷಕರು ಮತ್ತು ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ,ತೊಡಗಿಕೊಂಡಿರುವವರ ವಿಶಿಷ್ಟ ಶೈಕ್ಷಣಿಕ ಪ್ರಯೋಗಗಳನ್ನು, ನಾವಿನ್ಯ ಕಲಾಂತರ್ಗತ ಪ್ರಯೋಗಗಳನ್ನು ಗುರುತಿಸಿ ದಾಖಲಿಸುವ ಕೃತಿ ಪ್ರಕಟಣೆಗಾಗಿ*
*ಲೇಖನಗಳ ಆಹ್ವಾನ* .
ಆತ್ಮೀಯರೇ,
ನಿಮ್ಮ ಸರ್ಕಾರಿ ಶಾಲೆಗಳಲ್ಲಿ ನಡೆದಿರುವ ಕಲಾಂತರಗತ ಶೈಕ್ಷಣಿಕ ಪ್ರಯೋಗಗಳು ಮತ್ತು ಅವುಗಳ ಫಲಶೃತಿಗಳ ಕುರಿತು 4-5 ಪುಟ ಮೀರದಂತೆ ಸೂಕ್ತವಾದ ಎರಡು ಅಥವಾ ಮೂರು ಫೋಟೋಗಳೊಂದಿಗೆ ಎಂ ಎಸ್ ವರ್ಡ್ ನುಡಿಯಲ್ಲಿ ಟೈಪಿಸಿ ಕಳುಹಿಸಿ.
ತಾವು ತಮ್ಮ ಶಾಲೆಯಲ್ಲಿ ನಡೆಸಿದ ಯಾವುದೇ ರೀತಿಯ ಸುದೀರ್ಘ ಕಲಾಂತರ್ಗತ ಪ್ರಯೋಗಗಳು, ನಿರ್ದಿಷ್ಟ ಶೈಕ್ಷಣಿಕ ಯೋಜನೆಗಳು, ಅವುಗಳ ಉದ್ದೇಶ, ಸ್ವರೂಪ, ಗುರಿ ಮತ್ತು ಮಕ್ಕಳ ಕಲಿಕೆಯ ಮೇಲೆ, ಶಾಲಾ ಸಬಲೀಕರಣದ ಮೇಲೆ, ಮಕ್ಕಳ ಭಾಷಾ ಕೌಶಲ ಮತ್ತು ವಿವಿಧ ಕೌಶಲಗಳ ಮೇಲೆ, ಮಕ್ಕಳ ಸಾಹಿತ್ಯ ಮತ್ತು ಸೃಜನಶೀಲತೆಯ ಮೇಲೆ ಅವು ಬೀರಿದ ಪರಿಣಾಮಗಳನ್ನು ಸಹ ನಿಮ್ಮ ಲೇಖನ ಒಳಗೊಂಡಿರಬೇಕು.
ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿರುವ ವಿಶಿಷ್ಟ ಶೈಕ್ಷಣಿಕ ಪ್ರಯೋಗಗಳ ಕುರಿತು ಸಮುದಾಯಕ್ಕೆ ತಲುಪಿಸಲು ಒಂದು ಉತ್ತಮ ಕೃತಿ ಪ್ರಕಟಿಸಲು ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಹಾಗೂ ಮಕ್ಕಳ ಮಂದಾರ ಬಳಗ ನಿರ್ಧರಿಸಿದೆ.
**ನಿಮ್ಮ ಬರಹವನ್ನು ಕಳಿಸಲು ಕೊನೆ ದಿನಾಂಕ
*ಸೆಪ್ಟೆಂಬರ್ -25* .**
ಕಳುಹಿಸಿ - makkalamandara@gmail.com
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ-9980952630.
ನಿಮ್ಮ
ರವಿರಾಜ್ ಸಾಗರ್.
ಜಿಲ್ಲಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ತು.
ಶಿವಮೊಗ್ಗ.
9980952630.
Tuesday, March 14, 2023
ಆರ್ಮೀ ತರಬೇತಿ ಶಿಬಿರಕ್ಕೆ ಆಹ್ವಾನ
ಕಳೆದ ಬಾರಿ ಯಶಸ್ವಿಯಾಗಿ ಹಲವು ವಿದ್ಯಾರ್ಥಿಗಳಿಗೆ ಮಿಲಿಟರಿ ಉದ್ಯೋಗದ ಕನಸು ನನಸು ಮಾಡಿದ ಮಲೆನಾಡು ಕೋಚಿಂಗ್ ಸೆಂಟರ್ ಈ ವರ್ಷ ಸಹ ಶಿಬಿರ ಆಯೋಜಿಸಿದೆ.
ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.
Tuesday, March 7, 2023
ಜಿಲ್ಲಾ ಮಟ್ಟದ ಮಕ್ಕಳ ವಿಕಾಸೋತ್ಸವ
ಮಕ್ಕಳ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಮಕ್ಕಳ ವಿಕಾಸೋತ್ಸವ ಕಾರ್ಯಕ್ರಮ ಯಶಸ್ವಿ.
130 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕದಿಂದ ವಿವಿಧ ದತ್ತಿ ಪುರಸ್ಕಾರ ಸಮಾರಂಭ ಸಹ ಏರ್ಪಡಿಸಲಾಯಿತು.
ಜಿಲ್ಲಾ ಮಟ್ಟದ ಮಕ್ಕಳ ವಿಕಾಸೋತ್ಸವದಲ್ಲಿ ಸೂರ್ಯನ ಸಂದೇಶ ಮತ್ತು ಕಲಿತವರು ಮಕ್ಕಳ ಸಾಹಿತ್ಯ ಪ್ರತಿ ಪುಸ್ತಕ ಬಿಡುಗಡೆ ಮಾಡಿದರು.
ಮಕ್ಕಳ ಬೌದ್ಧಿಕ ವಿಕಾಸಕ್ಕೆ ಮಕ್ಕಳ ಶಿಬಿರಗಳು ಹೆಚ್ಚು ಹೆಚ್ಚು ಆಯೋಜಿಸಬೇಕು. ಇಂತಹ ಶ್ರಮವನ್ನು ಹಾಕಿರುವ ಜಿಲ್ಲಾ ಅಧ್ಯಕ್ಷರಾದ ರವಿರಾಜ್ ಸಾಗರ್ ಅವರ ಶ್ರಮ ಶ್ಲಾಘನೀಯ ಎಂದು ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳಿಂದ 120 ಮಕ್ಕಳು ಹಾಗೂ ಆಹ್ವಾನಿತ ಜಿಲ್ಲೆ ಹಾವೇರಿಯಿಂದ 10 ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಚಿತ ಶಿವಮೊಗ್ಗ ಘಟಕ ಆಚಾಪುರದ ಮುರುಗಮಠದಲ್ಲಿ ಎರಡು ದಿನಗಳ ಕಾಲ ಮಕ್ಕಳ ವಿಕಾಸೋತ್ಸವ ಶಿಬಿರವನ್ನು 11 ರಿಂದ 18 ವಯಸ್ಸಿನ ಮಕ್ಕಳಿಗಾಗಿ ಮನೋವೈಜ್ಞಾನಿಕ ವಿಷಯವನ್ನು ಕೇಂದ್ರೀಕರಿಸಿ ಶಿಬಿರ ಆಯೋಜಿಸಿತ್ತು.
ಮೊದಲ ಬಾರಿಗೆ ಮನೋವಿಜ್ಞಾನದ ವಿಷಯವನ್ನು ಕೇಂದ್ರೀಕರಿಸಿ ಎರಡು ದಿನದ ಶಿಬಿರವನ್ನು ಏರ್ಪಡಿಸಿರುವುದು ವಿಶಿಷ್ಟವಾಗಿದೆ , ಬಾಲ ವಿಕಾಸ ಅಕಾಡೆಮಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ರವಿರಾಜ್ ಸಾಗರ್ ಮಕ್ಕಳಿಗೆ ವಿನೂತನ ವಿಷಯವನ್ನು ಕೇಂದ್ರೀಕರಿಸಿ ಶಿಬಿರ ಆಯೋಜಿಸುತ್ತಿರುವುದು ಸಂತಸ ತಂದಿದೆ ಎಂದು
ಬಾಲ ವಿಕಾಸ ಅಕಾಡೆಮಿಯ ಯೋಜನಾಧಿಕಾರಿಗಳಾದ ಭಾರತಿ ಶೆಟ್ಟರ್ ನುಡಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಕಥಾ ಸ್ಪರ್ಧೆಯ ಆಯ್ದ ಕಥೆಗಳ ಸಂಕಲನ ಸೂರ್ಯನ ಸಂದೇಶ,
ಹಾಗೂ ರವಿರಾಜ್ ಸಾಗರ್ ಅವರ ಮಕ್ಕಳ ನಾಟಕ ಕಲಿತವರು ಮತ್ತು ಇತರ ಮಕ್ಕಳ ನಾಟಕಗಳು ಕೃತಿ ಬಿಡುಗಡೆ ಮಾಡಲಾಯಿತು.
ಮಕ್ಕಳ ಬುದ್ಧಿಶಕ್ತಿ, ಗ್ರಹಿಕೆ ಅವಧಾನ, ಸೃಜನಶೀಲತೆ ಮತ್ತು ಕಲ್ಪನಾಶೀಲತೆ ವಿಷಯ ಕೇಂದ್ರೀಕರಿಸಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಈ ವಿಕಾಸೋತ್ಸವ ಮಕ್ಕಳ ಅರಿವಿನ ಉತ್ಸವ ಆಗಿದೆ ಎಂದು ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರವಿರಾಜ್ ಸಾಗರ್ ಪ್ರಸ್ತಾವಿಕ ಮಾತುಗಳಲ್ಲಿ ತಿಳಿಸಿದರು.
ನವಚೇತನ ವೇದಿಕೆ ಅಧ್ಯಕ್ಷ ಪ್ರಶಾಂತ್ ಕೆಎಸ್ ಮಕ್ಕಳಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಾಹಿತ್ಯ ಪರಿಷತ್ತಿನ ಕೆಲಸ ಶ್ಲಾಘನೀಯ ಎಂದರು.
ದಾರವಾಡದ ಮಕ್ಕಳ ಸಾಹಿತಿ ವೈ ಜಿ ಭಗವತಿ, ಶಿವಮೊಗ್ಗದ ಕ್ರಿಯಾಶೀಲ ಶಿಕ್ಷಕಿ ಅಕ್ತರ್ ಭಾನು ಅವರಿಗೆ ಮಕ್ಕಳ ಮಂದಾರ ಪುರಸ್ಕಾರ ನೀಡಿ ಗೌರವಿಸಲಾಯಿತು.
ತಾಲೂಕು ಅಧ್ಯಕ್ಷರಾದ ಕಿಶೋರ್ ಕುಮಾರ್, ಹಾವೇರಿ ಜಿಲ್ಲಾಧ್ಯಕ್ಷ ವೆಂಕಟೇಶ್ ಉಪಸ್ಥಿತರಿದ್ದರು.
ಕಾರ್ಯದರ್ಶಿಗಳಾದ ಕುಮುದಾ ಸುಶೀಲ್ ಪಂಚಮಿ ಸಾಗರ್, ವಿದ್ಯಾಸಿಂಗ್ ,ಉಷಾ ಜಿಎ , ಶೇಖರಪ್ಪ ಕೋಳೂರು ಕಾರ್ಯಕ್ರಮ ನಿರ್ವಹಿಸಿದರು.
Saturday, February 4, 2023
ಮಕ್ಕಳ ವಿಕಾಸೋತ್ಸವ
ಪತ್ರಿಕಾ ಪ್ರಕಟಣೆಗಾಗಿ
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಮತ್ತು
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದಲ್ಲಿ*
ಜಿಲ್ಲಾ ಹಂತದಲ್ಲಿ ದಿನಾಂಕ 11-02-2023 ರಿಂದ 12-02-2023 ರವರೆಗೆ "ಮಕ್ಕಳ ವಿಕಾಸೋತ್ಸವ " ಆಯೋಜಿಸಲಾಗುತ್ತದೆ.ಸಾಗರ ತಾಲೂಕಿನ ಆಚಾಪುರದ ಮುರುಘಾ ಮಠದಲ್ಲಿ ವಸತಿ ವ್ಯವಸ್ಥೆ ಸಹ ಇರುತ್ತದೆ.
ಹೆಸರಾಂತ ಮನೋವಿಜ್ಞಾನಿಗಳು, ಇನ್ಫೋಸಿಸ್ ನ ತಂತ್ರಜ್ಞರು,ಆಪ್ತ ಸಲಹೆಗಾರರು, ಸಾಹಿತಿಗಳು, ರಂಗ ಶಿಕ್ಷಕರು ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುವರು.
ಶಿಬಿರದಲ್ಲಿ ಮಕ್ಕಳ ಮನೋವಿಕಾಸ ಮತ್ತು ಮನೋವಿಜ್ಞಾನ, ಮಕ್ಕಳ ಪ್ರತಿಭಾನ್ವೇಷಣೆ ಮತ್ತು ಆಪ್ತಸಮಾಲೋಚನೆ,ಅವಧಾನ, ಗ್ರಹಿಕೆ ಕೇಂದ್ರೀಕರಣ ಕೌಶಲ,ಮಕ್ಕಳ ತಿಳಿವು ಮತ್ತು ಅರಿವಿನ ದಾರಿಗಳು,
ಮಕ್ಕಳ ಕಲಿಕೆಗಾಗಿ ತಂತ್ರಜ್ಞಾನ ಮತ್ತು ಸೃಜನಶೀಲತೆ
ಮಕ್ಕಳ ಮನೋವಿಕಾಸಕ್ಕೆ ಜಾನಪದ ಕಲೆ ಮತ್ತು ಕ್ರೀಡೆಗಳು ವಿಷಯಗಳನ್ನು ಕೇಂದ್ರೀಕರಿಸಿ ತಜ್ಞರಿಂದ ತರಬೇತಿ ಶಿಬಿರ ಮತ್ತು ಮತ್ತು ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಎರಡು ದಿನಗಳ ಕಾಲ ಇರುತ್ತದೆ.11 ರಿಂದ 18 ವರ್ಷದೊಳಗಿನ ಮಕ್ಕಳು ಉಚಿತವಾಗಿ ಭಾಗವಹಿಸಲು ಅವಕಾಶವಿರುತ್ತದೆ.
ಉಚಿತವಾಗಿ ಹೆಸರು ನೋಂದಾಯಿಸಲು.*
*ಈ ಲಿಂಕ್ ಕ್ಲಿಕ್ ಮಾಡಿ* .
https://docs.google.com/forms/d/e/1FAIpQLScvUT1uE88FoL88lgHU5QB9U99cO0rM0elltjvchFD7nViqQg/viewform
Watsapp-
9980952630
ಎರಡು ದಿನಗಳ ಈ ಶಿಬಿರದಲ್ಲಿ
*ವಸತಿ ಬಯಸುವ ಮಕ್ಕಳಿಗೆ ವಸತಿ ವ್ಯವಸ್ಥೆ , ಪ್ರಮಾಣ ಪತ್ರ, ಉಚಿತ ಕಲಿಕಾ ಸಾಮಗ್ರಿ, ಮಕ್ಕಳ ಸಾಹಿತ್ಯ ಕೃತಿಗಳನ್ನು ನೀಡಲಾಗುತ್ತದೆ.*
**ಫೆಬ್ರವರಿ 11ಮತ್ತು 12. ಶನಿವಾರ* ಭಾನುವಾರ
ಸ್ಥಳ : ಆನಂದಪುರ. ಮುರುಗಾ ಮಠ, ಸಾಗರ* .
*(ಈ ಸುದ್ದಿಯನ್ನು ಎಲ್ಲಾ ಪ್ರಮುಖ ಪತ್ರಿಕೆಯಲ್ಲಿ ಪ್ರಕಟಿಸಿ ಮಕ್ಕಳಿಗೆ ಯೋಜನೆ ತಲುಪಿಸಲು ಅವಕಾಶ ನೀಡಬೇಕಾಗಿ ಕೋರುತ್ತೇನೆ.)*
ನಿಮ್ಮ
*ರವಿರಾಜ್ ಸಾಗರ್* .
ಜಿಲ್ಲಾ ಅಧ್ಯಕ್ಷರು,
ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ.
Subscribe to:
Posts (Atom)
ಎಪಿಗ್ರಾಫಿಯಾ ಕರ್ನಾಟಕ ಎಲ್ಲ ಶಾಸನಗಳನ್ನು ಈ ಲಿಂಕ್ ಅಲ್ಲಿ ಓದಿ
ಈ ಟೆಕ್ಸ್ಟ್ ಕ್ಲಿಕ್ ಮಾಡಿ ಲಿಂಕ್ ಪಡೆಯಿರಿ ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಕರ್ನಾಟಕ ಎಪಿಗ್ರಾಫಿಯಾ ಎಲ್ಲ ಸಂಪುಟಗಳನ್ನು ಉಚಿತವಾಗಿ ಓದಿ..
-
ಈ ಟೆಕ್ಸ್ಟ್ ಕ್ಲಿಕ್ ಮಾಡಿ ಲಿಂಕ್ ಪಡೆಯಿರಿ ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಕರ್ನಾಟಕ ಎಪಿಗ್ರಾಫಿಯಾ ಎಲ್ಲ ಸಂಪುಟಗಳನ್ನು ಉಚಿತವಾಗಿ ಓದಿ..
-
https://youtu.be/rNcrKQCpyjk *ಶಾಲಾ ಮಕ್ಕಳಿಗಾಗಿ ಸಾಂಪ್ರದಾಯಿಕ ಹಸೆ ಚಿತ್ತಾರ ಕಲಿಕೆಯೊಂದಿಗೆ ಸೃಜನಶೀಲ ಕಲಿಕೆ.* **ಮಾರ್ಗಗಳು* * *ಸಾಕ್ಷಚಿತ್ರ ವೀಕ್ಷಿಸಿ* ....
-
*ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು.* ರಿ. *ಶೃಂಗೇರಿಯಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಕಾರ್ಯಗಾರ* *ಉಚಿತ ನೊಂದಣಿ* ರಾಜ್ಯಮಟ್ಟದ ಹೆಸರಾಂತ ಮಕ್ಕಳ ಸಾಹಿ...