**ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ.*
ಮಕ್ಕಳ ಮಂದಾರ ಬಳಗ.*
ನೀವು ನಿಮ್ಮ ಶಾಲೆಯಲ್ಲಿ ನಡೆಸಿದ ವಿಶಿಷ್ಟ ಶೈಕ್ಷಣಿಕ ಕಲಾಂತರ್ಗತ ಪ್ರಯೋಗ, ವಿಶೇಷ ಚಟುವಟಿಕೆ, ನಿಮ್ಮ ಶಾಲಾ ಸಾಧನೆ ಕುರಿತು ಲೇಖನ ಬರೆಯಲು ಆಹ್ವಾನ...
*ಶಿಕ್ಷಕರು ಮತ್ತು ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ,ತೊಡಗಿಕೊಂಡಿರುವವರ ವಿಶಿಷ್ಟ ಶೈಕ್ಷಣಿಕ ಪ್ರಯೋಗಗಳನ್ನು, ನಾವಿನ್ಯ ಕಲಾಂತರ್ಗತ ಪ್ರಯೋಗಗಳನ್ನು ಗುರುತಿಸಿ ದಾಖಲಿಸುವ ಕೃತಿ ಪ್ರಕಟಣೆಗಾಗಿ*
*ಲೇಖನಗಳ ಆಹ್ವಾನ* .
ಆತ್ಮೀಯರೇ,
ನಿಮ್ಮ ಸರ್ಕಾರಿ ಶಾಲೆಗಳಲ್ಲಿ ನಡೆದಿರುವ ಕಲಾಂತರಗತ ಶೈಕ್ಷಣಿಕ ಪ್ರಯೋಗಗಳು ಮತ್ತು ಅವುಗಳ ಫಲಶೃತಿಗಳ ಕುರಿತು 4-5 ಪುಟ ಮೀರದಂತೆ ಸೂಕ್ತವಾದ ಎರಡು ಅಥವಾ ಮೂರು ಫೋಟೋಗಳೊಂದಿಗೆ ಎಂ ಎಸ್ ವರ್ಡ್ ನುಡಿಯಲ್ಲಿ ಟೈಪಿಸಿ ಕಳುಹಿಸಿ.
ತಾವು ತಮ್ಮ ಶಾಲೆಯಲ್ಲಿ ನಡೆಸಿದ ಯಾವುದೇ ರೀತಿಯ ಸುದೀರ್ಘ ಕಲಾಂತರ್ಗತ ಪ್ರಯೋಗಗಳು, ನಿರ್ದಿಷ್ಟ ಶೈಕ್ಷಣಿಕ ಯೋಜನೆಗಳು, ಅವುಗಳ ಉದ್ದೇಶ, ಸ್ವರೂಪ, ಗುರಿ ಮತ್ತು ಮಕ್ಕಳ ಕಲಿಕೆಯ ಮೇಲೆ, ಶಾಲಾ ಸಬಲೀಕರಣದ ಮೇಲೆ, ಮಕ್ಕಳ ಭಾಷಾ ಕೌಶಲ ಮತ್ತು ವಿವಿಧ ಕೌಶಲಗಳ ಮೇಲೆ, ಮಕ್ಕಳ ಸಾಹಿತ್ಯ ಮತ್ತು ಸೃಜನಶೀಲತೆಯ ಮೇಲೆ ಅವು ಬೀರಿದ ಪರಿಣಾಮಗಳನ್ನು ಸಹ ನಿಮ್ಮ ಲೇಖನ ಒಳಗೊಂಡಿರಬೇಕು.
ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿರುವ ವಿಶಿಷ್ಟ ಶೈಕ್ಷಣಿಕ ಪ್ರಯೋಗಗಳ ಕುರಿತು ಸಮುದಾಯಕ್ಕೆ ತಲುಪಿಸಲು ಒಂದು ಉತ್ತಮ ಕೃತಿ ಪ್ರಕಟಿಸಲು ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಹಾಗೂ ಮಕ್ಕಳ ಮಂದಾರ ಬಳಗ ನಿರ್ಧರಿಸಿದೆ.
**ನಿಮ್ಮ ಬರಹವನ್ನು ಕಳಿಸಲು ಕೊನೆ ದಿನಾಂಕ
*ಸೆಪ್ಟೆಂಬರ್ -25* .**
ಕಳುಹಿಸಿ - makkalamandara@gmail.com
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ-9980952630.
ನಿಮ್ಮ
ರವಿರಾಜ್ ಸಾಗರ್.
ಜಿಲ್ಲಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ತು.
ಶಿವಮೊಗ್ಗ.
9980952630.