ಮಕ್ಕಳ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಮಕ್ಕಳ ವಿಕಾಸೋತ್ಸವ ಕಾರ್ಯಕ್ರಮ ಯಶಸ್ವಿ.
130 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕದಿಂದ ವಿವಿಧ ದತ್ತಿ ಪುರಸ್ಕಾರ ಸಮಾರಂಭ ಸಹ ಏರ್ಪಡಿಸಲಾಯಿತು.
ಜಿಲ್ಲಾ ಮಟ್ಟದ ಮಕ್ಕಳ ವಿಕಾಸೋತ್ಸವದಲ್ಲಿ ಸೂರ್ಯನ ಸಂದೇಶ ಮತ್ತು ಕಲಿತವರು ಮಕ್ಕಳ ಸಾಹಿತ್ಯ ಪ್ರತಿ ಪುಸ್ತಕ ಬಿಡುಗಡೆ ಮಾಡಿದರು.
ಮಕ್ಕಳ ಬೌದ್ಧಿಕ ವಿಕಾಸಕ್ಕೆ ಮಕ್ಕಳ ಶಿಬಿರಗಳು ಹೆಚ್ಚು ಹೆಚ್ಚು ಆಯೋಜಿಸಬೇಕು. ಇಂತಹ ಶ್ರಮವನ್ನು ಹಾಕಿರುವ ಜಿಲ್ಲಾ ಅಧ್ಯಕ್ಷರಾದ ರವಿರಾಜ್ ಸಾಗರ್ ಅವರ ಶ್ರಮ ಶ್ಲಾಘನೀಯ ಎಂದು ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳಿಂದ 120 ಮಕ್ಕಳು ಹಾಗೂ ಆಹ್ವಾನಿತ ಜಿಲ್ಲೆ ಹಾವೇರಿಯಿಂದ 10 ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಚಿತ ಶಿವಮೊಗ್ಗ ಘಟಕ ಆಚಾಪುರದ ಮುರುಗಮಠದಲ್ಲಿ ಎರಡು ದಿನಗಳ ಕಾಲ ಮಕ್ಕಳ ವಿಕಾಸೋತ್ಸವ ಶಿಬಿರವನ್ನು 11 ರಿಂದ 18 ವಯಸ್ಸಿನ ಮಕ್ಕಳಿಗಾಗಿ ಮನೋವೈಜ್ಞಾನಿಕ ವಿಷಯವನ್ನು ಕೇಂದ್ರೀಕರಿಸಿ ಶಿಬಿರ ಆಯೋಜಿಸಿತ್ತು.
ಮೊದಲ ಬಾರಿಗೆ ಮನೋವಿಜ್ಞಾನದ ವಿಷಯವನ್ನು ಕೇಂದ್ರೀಕರಿಸಿ ಎರಡು ದಿನದ ಶಿಬಿರವನ್ನು ಏರ್ಪಡಿಸಿರುವುದು ವಿಶಿಷ್ಟವಾಗಿದೆ , ಬಾಲ ವಿಕಾಸ ಅಕಾಡೆಮಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ರವಿರಾಜ್ ಸಾಗರ್ ಮಕ್ಕಳಿಗೆ ವಿನೂತನ ವಿಷಯವನ್ನು ಕೇಂದ್ರೀಕರಿಸಿ ಶಿಬಿರ ಆಯೋಜಿಸುತ್ತಿರುವುದು ಸಂತಸ ತಂದಿದೆ ಎಂದು
ಬಾಲ ವಿಕಾಸ ಅಕಾಡೆಮಿಯ ಯೋಜನಾಧಿಕಾರಿಗಳಾದ ಭಾರತಿ ಶೆಟ್ಟರ್ ನುಡಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಕಥಾ ಸ್ಪರ್ಧೆಯ ಆಯ್ದ ಕಥೆಗಳ ಸಂಕಲನ ಸೂರ್ಯನ ಸಂದೇಶ,
ಹಾಗೂ ರವಿರಾಜ್ ಸಾಗರ್ ಅವರ ಮಕ್ಕಳ ನಾಟಕ ಕಲಿತವರು ಮತ್ತು ಇತರ ಮಕ್ಕಳ ನಾಟಕಗಳು ಕೃತಿ ಬಿಡುಗಡೆ ಮಾಡಲಾಯಿತು.
ಮಕ್ಕಳ ಬುದ್ಧಿಶಕ್ತಿ, ಗ್ರಹಿಕೆ ಅವಧಾನ, ಸೃಜನಶೀಲತೆ ಮತ್ತು ಕಲ್ಪನಾಶೀಲತೆ ವಿಷಯ ಕೇಂದ್ರೀಕರಿಸಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಈ ವಿಕಾಸೋತ್ಸವ ಮಕ್ಕಳ ಅರಿವಿನ ಉತ್ಸವ ಆಗಿದೆ ಎಂದು ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರವಿರಾಜ್ ಸಾಗರ್ ಪ್ರಸ್ತಾವಿಕ ಮಾತುಗಳಲ್ಲಿ ತಿಳಿಸಿದರು.
ನವಚೇತನ ವೇದಿಕೆ ಅಧ್ಯಕ್ಷ ಪ್ರಶಾಂತ್ ಕೆಎಸ್ ಮಕ್ಕಳಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಾಹಿತ್ಯ ಪರಿಷತ್ತಿನ ಕೆಲಸ ಶ್ಲಾಘನೀಯ ಎಂದರು.
ದಾರವಾಡದ ಮಕ್ಕಳ ಸಾಹಿತಿ ವೈ ಜಿ ಭಗವತಿ, ಶಿವಮೊಗ್ಗದ ಕ್ರಿಯಾಶೀಲ ಶಿಕ್ಷಕಿ ಅಕ್ತರ್ ಭಾನು ಅವರಿಗೆ ಮಕ್ಕಳ ಮಂದಾರ ಪುರಸ್ಕಾರ ನೀಡಿ ಗೌರವಿಸಲಾಯಿತು.
ತಾಲೂಕು ಅಧ್ಯಕ್ಷರಾದ ಕಿಶೋರ್ ಕುಮಾರ್, ಹಾವೇರಿ ಜಿಲ್ಲಾಧ್ಯಕ್ಷ ವೆಂಕಟೇಶ್ ಉಪಸ್ಥಿತರಿದ್ದರು.
ಕಾರ್ಯದರ್ಶಿಗಳಾದ ಕುಮುದಾ ಸುಶೀಲ್ ಪಂಚಮಿ ಸಾಗರ್, ವಿದ್ಯಾಸಿಂಗ್ ,ಉಷಾ ಜಿಎ , ಶೇಖರಪ್ಪ ಕೋಳೂರು ಕಾರ್ಯಕ್ರಮ ನಿರ್ವಹಿಸಿದರು.