ಪತ್ರಿಕಾ ಪ್ರಕಟಣೆಗಾಗಿ
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಮತ್ತು
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದಲ್ಲಿ*
ಜಿಲ್ಲಾ ಹಂತದಲ್ಲಿ ದಿನಾಂಕ 11-02-2023 ರಿಂದ 12-02-2023 ರವರೆಗೆ "ಮಕ್ಕಳ ವಿಕಾಸೋತ್ಸವ " ಆಯೋಜಿಸಲಾಗುತ್ತದೆ.ಸಾಗರ ತಾಲೂಕಿನ ಆಚಾಪುರದ ಮುರುಘಾ ಮಠದಲ್ಲಿ ವಸತಿ ವ್ಯವಸ್ಥೆ ಸಹ ಇರುತ್ತದೆ.
ಹೆಸರಾಂತ ಮನೋವಿಜ್ಞಾನಿಗಳು, ಇನ್ಫೋಸಿಸ್ ನ ತಂತ್ರಜ್ಞರು,ಆಪ್ತ ಸಲಹೆಗಾರರು, ಸಾಹಿತಿಗಳು, ರಂಗ ಶಿಕ್ಷಕರು ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುವರು.
ಶಿಬಿರದಲ್ಲಿ ಮಕ್ಕಳ ಮನೋವಿಕಾಸ ಮತ್ತು ಮನೋವಿಜ್ಞಾನ, ಮಕ್ಕಳ ಪ್ರತಿಭಾನ್ವೇಷಣೆ ಮತ್ತು ಆಪ್ತಸಮಾಲೋಚನೆ,ಅವಧಾನ, ಗ್ರಹಿಕೆ ಕೇಂದ್ರೀಕರಣ ಕೌಶಲ,ಮಕ್ಕಳ ತಿಳಿವು ಮತ್ತು ಅರಿವಿನ ದಾರಿಗಳು,
ಮಕ್ಕಳ ಕಲಿಕೆಗಾಗಿ ತಂತ್ರಜ್ಞಾನ ಮತ್ತು ಸೃಜನಶೀಲತೆ
ಮಕ್ಕಳ ಮನೋವಿಕಾಸಕ್ಕೆ ಜಾನಪದ ಕಲೆ ಮತ್ತು ಕ್ರೀಡೆಗಳು ವಿಷಯಗಳನ್ನು ಕೇಂದ್ರೀಕರಿಸಿ ತಜ್ಞರಿಂದ ತರಬೇತಿ ಶಿಬಿರ ಮತ್ತು ಮತ್ತು ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಎರಡು ದಿನಗಳ ಕಾಲ ಇರುತ್ತದೆ.11 ರಿಂದ 18 ವರ್ಷದೊಳಗಿನ ಮಕ್ಕಳು ಉಚಿತವಾಗಿ ಭಾಗವಹಿಸಲು ಅವಕಾಶವಿರುತ್ತದೆ.
ಉಚಿತವಾಗಿ ಹೆಸರು ನೋಂದಾಯಿಸಲು.*
*ಈ ಲಿಂಕ್ ಕ್ಲಿಕ್ ಮಾಡಿ* .
https://docs.google.com/forms/d/e/1FAIpQLScvUT1uE88FoL88lgHU5QB9U99cO0rM0elltjvchFD7nViqQg/viewform
Watsapp-
9980952630
ಎರಡು ದಿನಗಳ ಈ ಶಿಬಿರದಲ್ಲಿ
*ವಸತಿ ಬಯಸುವ ಮಕ್ಕಳಿಗೆ ವಸತಿ ವ್ಯವಸ್ಥೆ , ಪ್ರಮಾಣ ಪತ್ರ, ಉಚಿತ ಕಲಿಕಾ ಸಾಮಗ್ರಿ, ಮಕ್ಕಳ ಸಾಹಿತ್ಯ ಕೃತಿಗಳನ್ನು ನೀಡಲಾಗುತ್ತದೆ.*
**ಫೆಬ್ರವರಿ 11ಮತ್ತು 12. ಶನಿವಾರ* ಭಾನುವಾರ
ಸ್ಥಳ : ಆನಂದಪುರ. ಮುರುಗಾ ಮಠ, ಸಾಗರ* .
*(ಈ ಸುದ್ದಿಯನ್ನು ಎಲ್ಲಾ ಪ್ರಮುಖ ಪತ್ರಿಕೆಯಲ್ಲಿ ಪ್ರಕಟಿಸಿ ಮಕ್ಕಳಿಗೆ ಯೋಜನೆ ತಲುಪಿಸಲು ಅವಕಾಶ ನೀಡಬೇಕಾಗಿ ಕೋರುತ್ತೇನೆ.)*
ನಿಮ್ಮ
*ರವಿರಾಜ್ ಸಾಗರ್* .
ಜಿಲ್ಲಾ ಅಧ್ಯಕ್ಷರು,
ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ.