Saturday, March 20, 2021

ಪ್ರಥಮ ಮಕ್ಕಳ ಸಾಹಿತ್ಯೋತ್ಸವ ಲೋಗೋ ಬಿಡುಗಡೆ

ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ವತಿಯಿಂದ ವಿವಿಧ ದತ್ತಿ ಪುರಸ್ಕಾರಕ್ಕೆ ಆಹ್ವಾನ

ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ.

1.ಕೊಡಕ್ಕಲ್ ಶಿವಪ್ರಸಾದ್   ಪುರಸ್ಕಾರಕ್ಕೆ ಅರ್ಜಿ ಆಹ್ವಾನ
2.ಎಸ್. ಮಾಲತಿ ಸಾಗರ್ ಪುರಸ್ಕಾರ.

ಮಕ್ಕಳ ಹಕ್ಕುಗಳು, ಅಂಗವಿಕಲರ ಸಬಲೀಕರಣಕ್ಕೆ, ಅನಾಥ ಮಕ್ಕಳ ಸಂರಕ್ಷಣೆಗೆ, ಅವಕಾಶ ವಂಚಿತ ಮಕ್ಕಳ ಕ್ಷೇಮಾಭಿವೃದ್ಧಿ, ಮಕ್ಕಳ ಶಿಕ್ಷಣ ಕ್ಷೇತ್ರಕ್ಕೆ  ಜೀವನವಿಡಿ  ಶ್ರಮಸಿರುವರನ್ನು ಗುರುತಿಸಿ ರಾಜ್ಯಮಟ್ಟದ ಪುರಸ್ಕಾರಕ್ಕೆ  ನಾಮನಿರ್ದೇಶನ ಆಹ್ವಾನಿಸಲಾಗಿದೆ.
ಸಾಧನೆ ಮತ್ತು ಪೂರ್ಣ ವಿಳಾಸ, ಮತ್ತಿತರ ಅಗತ್ಯ ದಾಖಲೆ ವಿವರಗಳೊಂದಿಗೆ  ಸಾಧಕರು ಅಥವಾ ಸಂಸ್ಥೆ, ಇನ್ನಿತರರು ನಾಮನಿರ್ದೇಶನ ಮಾಡಬಹುದು.
ಸಂಬಂಧಿತ ಪಿಡಿಎಫ್ ಫೈಲ್ ಅನ್ನು ಈ ಕೆಳಗಿನ ಈಮೇಲ್ ಗೆ ಕಳುಹಿಸಬಹುದು.

ಕೊನೆ ದಿನಾಂಕ-ಮಾರ್ಚ್ 20.

ಈ ಪುರಸ್ಕಾರವು ನಗದು ಬಹುಮಾನ ಸನ್ಮಾನ ಪ್ರಶಸ್ತಿ ಪತ್ರ ಒಳಗೊಂಡಿದೆ. ಶಿವಮೊಗ್ಗದಲ್ಲಿ ನಡೆಯಲಿರುವ ಮಕ್ಕಳ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ  ಪ್ರಶಸ್ತಿ ವಿತರಿಸಲಾಗುತ್ತದೆ.

*
2.ಎಸ್ .ಮಾಲತಿ ಸಾಗರ್   ದತ್ತಿ ಪುರಸ್ಕಾರಕ್ಕೆ ಅರ್ಜಿ ಆಹ್ವಾನ.

ಮಕ್ಕಳ ನಾಟಕ , ಹೆಣ್ಣು ಮಕ್ಕಳ ಸಬಲೀಕರಣ, ಮಹಿಳಾ ಕಲಾವಿದರಿಗೆ  ಜೀವನವಿಡಿ  ಶ್ರಮಿಸಿದ  ಸೇವೆ ಗುರುತಿಸಿ ರಾಜ್ಯಮಟ್ಟದ ದತ್ತಿ ಪುರಸ್ಕಾರಕ್ಕೆ  ನಾಮನಿರ್ದೇಶನ ಆಹ್ವಾನಿಸಲಾಗಿದೆ.
ಸಾಧನೆ ಮತ್ತು ಪೂರ್ಣ ವಿಳಾಸ, ಮತ್ತಿತರ ಅಗತ್ಯ ದಾಖಲೆ ವಿವರಗಳೊಂದಿಗೆ  ಸಾಧಕರು ಅಥವಾ ಸಂಸ್ಥೆ, ಇನ್ನಿತರರು ನಾಮನಿರ್ದೇಶನ ಮಾಡಬಹುದು.
ಸಂಬಂಧಿತ ಪಿಡಿಎಫ್ ಫೈಲ್ ಅನ್ನು ಈ ಕೆಳಗಿನ ಈಮೇಲ್ ಗೆ ಕಳುಹಿಸಬಹುದು.

ಕೊನೆ ದಿನಾಂಕ-ಮಾರ್ಚ್ .22

ಶಿವಮೊಗ್ಗದಲ್ಲಿ ನಡೆಯಲಿರುವ ಮಕ್ಕಳ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ  ಈ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ.

rvc.md8@gmail.com.
ವಾಟ್ಸಪ್.
9980952630.

ರವಿರಾಜ್ ಸಾಗರ್
ಜಿಲ್ಲಾ ಅಧ್ಯಕ್ಷರು
ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ

Sunday, January 10, 2021

ಮಕ್ಕಳ ಸಾಹಿತ್ಯ ಪರಿಷತ್ ಶಿವಮೊಗ್ಗ ವಾರ್ಷಿಕ ವರದಿ

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ

2020 ನೆ ಸಾಲಿನಲ್ಲಿ ನಡೆಸಿದ ಕಾರ್ಯಚಟುವಟಿಕೆಗಳ ವಿವರ.

ಆತ್ಮೀಯರೇ,

ಕೊರೋನಾದ ವಿಪತ್ತಿನ ಕಾಲಘಟ್ಟದಲ್ಲಿ ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ನಿಲ್ಲಿಸಿದ್ದವು. ಮಕ್ಕಳಿಗೆ ಶಾಲೆ ಇಲ್ಲದೆ , ಸ್ನೇಹಿತರ ಒಡನಾಟ ಇಲ್ಲದೆ  ಸಂಕಷ್ಟಕ್ಕೆ ಒಳಗಾಗಿದ್ದರು. ಪಾಲಕರಿಗೆ ಮಕ್ಕಳ ಕಾರ್ಯದ ಹೊರೆ, ಮತ್ತಿತರ ಕೆಲವು ಕಿರಿಕಿರಿಗಳಿದ್ದ ಸಮಯದಲ್ಲಿಯೂ ಒಂದಿಷ್ಟು ಹೊಸತನದ ಆನ್ಲೈನ್ ಕಾರ್ಯಕ್ರಮಗಳೊಂದಿಗೆ ಮಕ್ಕಳನ್ನು ಪಾಲಕರನ್ನು ತಲುಪಲು ಶಿವಮೊಗ್ಗ ಮಕ್ಕಳ ಸಾಹಿತ್ಯ ಪರಿಷತ್ತು ಶ್ರಮಿಸಿದೆ. ನಿರಂತರವಾಗಿ ಆನ್ಲೈನ್ ಕಾರ್ಯಕ್ರಮಗಳನ್ನು, ಸಂವಾದಗಳನ್ನು, ಸ್ಪರ್ಧೆಗಳನ್ನು ಮಕ್ಕಳ ಪ್ರತಿಭೆಗಳನ್ನು ಗುರುತಿಸುವ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ರಚನಾತ್ಮಕ ಕಾರ್ಯಗಳಿಗೆ ನಮ್ಮ ಆದ್ಯತೆ.

ಮುಖ್ಯವಾಗಿ ಜಿಲ್ಲಾಮಟ್ಟದಲ್ಲಿ
1.ಜಾನಪದ ಗೀತೆ ನೃತ್ಯ ಸ್ಪರ್ಧೆ
2.ಶಿಶುಗೀತೆ ಮಕ್ಕಳ ಕವನ ವಾಚನ ಸ್ಪರ್ಧೆ
3.ರಾಜ್ಯಮಟ್ಟದ ಮಕ್ಕಳ ಕಥೆ ಹೇಳುವ ಸ್ಪರ್ಧೆ
4.ರಾಜ್ಯಮಟ್ಟದ ಜನಪದ ಆಟಗಳ ಪರಿಚಯ ಸ್ಪರ್ಧೆ
5.ರಾಜ್ಯಮಟ್ಟದ ಲೇಖನ ಪ್ರಬಂಧ ಬರೆಯುವ ಸ್ಪರ್ಧೆ
6.ಅಂತರಾಷ್ಟ್ರೀಯ ಮಟ್ಟದ ಕುವೆಂಪು ಗೀತೆ ಗಾಯನ ಸ್ಪರ್ಧೆ
7.ನಮ್ಮ ಮನೆ ಭಾಷೆ ನಮ್ಮ ಹೆಮ್ಮೆ ಅಭಿಯಾನ.
8.ಜಿಲ್ಲಾ ಮಟ್ಟದ ಮಕ್ಕಳ ಬರಹಗಳ ಪ್ರಾತಿನಿಧಿಕ ಸಂಕಲನಕ್ಕೆ ಬರಹಗಳ ಆಹ್ವಾನ.
9.ಮಕ್ಕಳ ಮಂದಾರ ಪತ್ರಿಕಾ ಪ್ರಕಟಣೆ.
10.ಮಕ್ಕಳ ಸಾಹಿತ್ಯ ಪರಿಷತ್ ಶಿವಮೊಗ್ಗ ಅಂತರ್ಜಾಲತಾಣ ಬಿಡುಗಡೆ.
11.ಪ್ರತಿ ತಿಂಗಳ 2 ಭಾನುವಾರ ಮಕ್ಕಳ ಸಾಹಿತ್ಯ ಸಂಭ್ರಮ ಆನ್ಲೈನ್ ಸರಣಿ ಆಯೋಜಿಸಲಾಗಿದೆ.
12. ಮಕ್ಕಳ ದಸರಾ ಕವಿಗೋಷ್ಠಿ ಮತ್ತು ಉಪನ್ಯಾಸ ನಿರಂತರ ಒಂದು ವಾರ ನಡೆಸಲಾಗಿದೆ.
13. ಹಿರಿಯ ಸಾಹಿತಿಗಳೊಂದಿಗೆ ಮಕ್ಕಳ ಸಾಹಿತ್ಯ ಸಂವಾದ
14. ಮಕ್ಕಳ ಪುಸ್ತಕ ಪರಿಚಯ
15. ಸಾಧನೆಗೈದ ಮಕ್ಕಳ ಪ್ರತಿಭಾ ಪರಿಚಯ, ಸಾಕ್ಷ್ಯಚಿತ್ರ ಚಿತ್ರ ಬಿಡುಗಡೆ.

16. ಯೂಟ್ಯೂಬ್ ಮತ್ತು ಫೇಸ್ ಬುಕ್ ಪೇಜ್ ನಲ್ಲಿ ನಮ್ಮೆಲ್ಲಾ ಕಾರ್ಯಕ್ರಮಗಳ ಪ್ರಸಾರ ಮತ್ತು ಮಕ್ಕಳ ಸಾಹಿತ್ಯ, ಮಕ್ಕಳ ಶಿಕ್ಷಣಕ್ಕೆ ಪೂರಕ ಪಠ್ಯ ವಿಡಿಯೋ ಪ್ರಸಾರ.
  ತಾಲೂಕು ಘಟಕಗಳ ಸಹಯೋಗದೊಂದಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ.

ಇದಿಷ್ಟು ಚಟುವಟಿಕೆಗಳನ್ನು ಇದೇ ವರ್ಷ ಯಶಸ್ವಿ ಗೊಳಿಸಲಾಗಿದೆ. ಇದಕ್ಕಾಗಿ ಸಾಕಷ್ಟು ಸಮಯ, ಶ್ರಮ ಹಣ ವಿನಿಯೋಗಿಸಲಾಗಿದೆ. ಇದು ಮಕ್ಕಳಿಗಾಗಿ ನಮ್ಮ ತಂಡದ ಪುಟ್ಟ ಕೊಡುಗೆ.

 ರಾಜ್ಯ ಮತ್ತು ಜಿಲ್ಲಾ ಹಂತದಲ್ಲಿ ಮಕ್ಕಳು ಮತ್ತು ಪಾಲಕರು, ಶಿಕ್ಷಕರು, ಸಾಹಿತಿಗಳು  ಸೇರಿದಂತೆ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಸಾಹಿತ್ಯ ಪ್ರೇಮಿಗಳನ್ನು ಕ್ರಿಯಾತ್ಮಕವಾಗಿ ತಲುಪಲಾಗದೆ.

ಈಗಾಗಲೇ ರಾಜ್ಯ ಹಂತದಲ್ಲಿ ನಡೆದ ಕಾರ್ಯಕ್ರಮಗಳ ಬಹುಮಾನಗಳನ್ನು ವಿತರಿಸಲಾಗಿದೆ.
ಜಿಲ್ಲಾ ಹಂತದಲ್ಲಿ ನಡೆದ ಕಾರ್ಯಕ್ರಮಗಳ ಬಹುಮಾನವನ್ನು ಫೆಬ್ರವರಿ ತಿಂಗಳಿನ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.

ಸಾಹಿತ್ಯ-ಸಾಂಸ್ಕೃತಿಕ  ಚಟುವಟಿಕೆಗೆ ಕ್ರಿಯಾತ್ಮಕ ರಚನಾತ್ಮಕವಾಗಿ ಮಕ್ಕಳನ್ನು ತೊಡಗಿಸುವುದು ನಮ್ಮ ಆದ್ಯತೆ ಮತ್ತು ಬದ್ಧತೆ.

ತಮ್ಮೆಲ್ಲ ಮಕ್ಕಳು ಮತ್ತು ಪಾಲಕರ ಸಹಕಾರದಿಂದ, ಶಿವಮೊಗ್ಗದ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರಾದ  ಉಮೇಶ್ ಭದ್ರಾಪುರ, ಚಂದ್ರಪ್ಪ ಅಳೂರ, ರತ್ನಾಕರ ಕೆಸಿನ ಮನೆ, ಡಾಕೇಶ್ ತಾಳಗುಂದ, ಅಣ್ಣಪ್ಪ ಒಂಟಿ ಮಾಳಗಿ, ಚಂದ್ರಶೇಖರ ಚಕ್ರಸಾಲಿ , ಸ್ಟಾನಿ ಲೋಪೀಸ್ ಹಾಗೂ ಪದಾಧಿಕಾರಿಗಳ  ಸಹಕಾರ ಸಹಯೋಗದೊಂದಿಗೆ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಮ್ಮ ಚಟುವಟಿಕೆಗಳನ್ನು ಯಶಸ್ವಿಗೊಳಿಸಲಾಗಿದೆ.


ಮುಂದೆ ಮತ್ತಷ್ಟು ಕ್ರಿಯಾತ್ಮಕ ಚಟುವಟಿಕೆ ರೂಪಿಸುವ ಯೋಜನೆ ಹಾಕಿಕೊಂಡಿದ್ದೇವೆ. ಕೊರೋನಾ ಕಾಲಘಟ್ಟ ಮುಗಿದ  ನಂತರ ಮಕ್ಕಳಿಗಾಗಿ ಸಣ್ಣ ಸಣ್ಣ ರಚನಾತ್ಮಕ ಹಾಗೂ ಕ್ರಿಯಾತ್ಮಕ ವೇದಿಕೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತವೆ.


ಸಲಹೆ ಸಹಕಾರ ಮಾರ್ಗದರ್ಶನ ಬಯಸುತ್ತೇವೆ.

ನಿಮ್ಮ 
ರವಿರಾಜ್ ಸಾಗರ್ .ಮಂಡಗಳಲೆ.
ಜಿಲ್ಲಾಧ್ಯಕ್ಷರು ಶಿವಮೊಗ್ಗ.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು.
9980952630.

ಕಾರ್ಯಾಧ್ಯಕ್ಷರು 
ಕುಮುದಾ ಸುಶೀಲ.


ಎಪಿಗ್ರಾಫಿಯಾ ಕರ್ನಾಟಕ ಎಲ್ಲ ಶಾಸನಗಳನ್ನು ಈ ಲಿಂಕ್ ಅಲ್ಲಿ ಓದಿ

ಈ ಟೆಕ್ಸ್ಟ್ ಕ್ಲಿಕ್ ಮಾಡಿ ಲಿಂಕ್ ಪಡೆಯಿರಿ ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಕರ್ನಾಟಕ ಎಪಿಗ್ರಾಫಿಯಾ ಎಲ್ಲ ಸಂಪುಟಗಳನ್ನು ಉಚಿತವಾಗಿ ಓದಿ..