Monday, April 11, 2022

ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಕಾರ್ಯಗಾರ

*ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು.* ರಿ.


 *ಶೃಂಗೇರಿಯಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಕಾರ್ಯಗಾರ* 

 *ಉಚಿತ ನೊಂದಣಿ* 

ರಾಜ್ಯಮಟ್ಟದ ಹೆಸರಾಂತ ಮಕ್ಕಳ ಸಾಹಿತಿಗಳಿಂದ, ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯು

 *ಏಪ್ರಿಲ್ ತಿಂಗಳ ದಿನಾಂಕ 26 ರಿಂದ 29 ರವರೆಗೆ.* ಇದೆ.

ಪ್ರತಿ ಜಿಲ್ಲೆಯಿಂದ  ಗರಿಷ್ಠ ಎಂಟು ಮಕ್ಕಳಿಗೆ ಅವಕಾಶ ಇದೆ.


ಪ್ರತಿ ಜಿಲ್ಲೆಯಲ್ಲಿ  ಎಂಟು ಮಕ್ಕಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.

 *8 ನೇ ತರಗತಿಯಿಂದ ಮೊದಲ ವರ್ಷದ ಪಿಯುಸಿ  ಓದುತ್ತಿರುವ ವಿದ್ಯಾರ್ಥಿಗಳಿಗೆ  ಆದ್ಯತೆ ನೀಡಲಾಗುತ್ತದೆ.* 

ಆಯ್ಕೆಯಾದ ಮಕ್ಕಳಿಗೆ ಶೃಂಗೇರಿಯಲ್ಲಿ ಮೂರು ದಿನ *ಉಚಿತ ವಸತಿ, ಊಟದ ವ್ಯವಸ್ಥೆ ಸರ್ಟಿಫಿಕೇಟ್ ಇರುತ್ತದೆ.* 

 *ನಿಮ್ಮ ವಿವರಗಳನ್ನು ಈ ಕೆಳಗಿನ ಇಮೇಲ್ ಗೆ ಕಳಿಸಿ.* 
ಅಥವಾ ನಮ್ಮನ್ನು ಸಂಪರ್ಕಿಸಿ
ವಾಟ್ಸಾಪ್ ಮಾಡಿ
9980952630.

Makkalamandara@Gmail.com.

 *ಶೇರ್ ಮಾಡಿ* 

 **ಚ ನಾ ಆಶೋಕ* 
ರಾಜ್ಯಾಧ್ಯಕ್ಷರು* 


ನಿಮ್ಮ
 ರವಿರಾಜ್ ಸಾಗರ್.
ಜಿಲ್ಲಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ.
9980952630

Tuesday, March 29, 2022

ಶಾಲಾ ಮಕ್ಕಳಿಗಾಗಿ ಹಸೆ ಚಿತ್ತಾರ ಸಾಂಪ್ರದಾಯಿಕ ಚಿತ್ರಕಲೆಯೊಂದಿಗೆ ಸೃಜನಶೀಲ ಕಲಿಕೆ ಮಾರ್ಗಗಳು

https://youtu.be/rNcrKQCpyjk
 *ಶಾಲಾ ಮಕ್ಕಳಿಗಾಗಿ ಸಾಂಪ್ರದಾಯಿಕ ಹಸೆ ಚಿತ್ತಾರ ಕಲಿಕೆಯೊಂದಿಗೆ ಸೃಜನಶೀಲ ಕಲಿಕೆ.* **ಮಾರ್ಗಗಳು* 
 *ಸಾಕ್ಷಚಿತ್ರ ವೀಕ್ಷಿಸಿ* .

ಶೇರ್ ಮಾಡಿ.

ನಿಮ್ಮ
ರವಿರಾಜ್ ಸಾಗರ್.

Thursday, March 3, 2022

ವಿವಿಧ ದತ್ತಿ ಪುರಸ್ಕಾರಗಳಿಗೆ ಆಹ್ವಾನ

*ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ  ಘಟಕದಿಂದ 2021 ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ* 


ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು  ಶಿವಮೊಗ್ಗ
ಸೃಜನ ಶಿಕ್ಷಣ ಸಂಶೋಧನಾ ಟ್ರಸ್ಟ್ (ರಿ)
ಮಕ್ಕಳ ಮಂದಾರ ಬಳಗ ಸಹಯೋಗದಲ್ಲಿ
2021 ನೇ ಸಾಲಿನ ವಿವಿಧ  ಐದು ವಿಭಾಗಗಳ ದತ್ತಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.


 *1. ಡಾ.ಕೊಡಕ್ಕಲ್ ಶಿವಪ್ರಸಾದ್ ದತ್ತಿ ಪುರಸ್ಕಾರ* 

ರಾಜ್ಯದ ಅಂಗವಿಕಲ ಮಕ್ಕಳ ಶಿಕ್ಷಣ , ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದವರಿಗೆ ಈ ಪುರಸ್ಕಾರ ಮೀಸಲಾಗಿದೆ. ಸಂಬಂಧಿಸಿದ ತಮ್ಮ ಸೇವಾ ವಿವರಗಳನ್ನು  ಪಿಡಿ ಎಪ್ ಕಳುಹಿಸಲು ಕೋರಿದೆ.

Makkalamandara@gmail.com


2 *."ಮಕ್ಕಳ ಮಂದಾರ ರಾಜ್ಯ ಪ್ರಶಸ್ತಿ" ಪುರಸ್ಕಾರಕ್ಕೆ ಅರ್ಜಿ ಆಹ್ವಾನ* 

21 ನೇ ಸಾಲಿನಲ್ಲಿ ಪ್ರಕಟವಾದ ಯಾವುದೇ ರೀತಿಯ ಮಕ್ಕಳ ಸಾಹಿತ್ಯ ಕೃತಿಗಳಿಗೆ ಈ ಪ್ರಶಸ್ತಿ ಮೀಸಲು. 
ಈ ಪ್ರಶಸ್ತಿ ಆಯ್ಕೆಗೆ ಬಂದ ಮಕ್ಕಳ ಸಾಹಿತ್ಯದ ವೈವಿಧ್ಯಮಯ ಕೃತಿಗಳ ಸಂಖ್ಯೆಯನ್ನು  ಗುಣಮಟ್ಟವನ್ನು ಆಧರಿಸಿ ಈ ಪ್ರಶಸ್ತಿಯ ಪುರಸ್ಕೃತರ  ಸಂಖ್ಯೆಗಳನ್ನು ಸಮಿತಿಯಿಂದ ನಿರ್ಧರಿಸಲಾಗುತ್ತದೆ.


 *3. ನೇಕಾರ ಪ್ರಕಾಶನ ದತ್ತಿ ಪುರಸ್ಕಾರ* 

ಈ ಪುರಸ್ಕಾರವು  2021 ನೇ  ಸಾಲಿನಲ್ಲಿ
ಪ್ರಕಟವಾದ  ಜಾನಪದ ಸಾಹಿತ್ಯ ವಿಭಾಗದಲ್ಲಿ ಕೃತಿ ಪ್ರಕಟಿಸಿದ   ಉತ್ತಮ ಕೃತಿಗೆ ಮೀಸಲಾಗಿರುತ್ತದೆ.

 *4. ಶ್ರೀಮತಿ  ಕುಮುದಾ ಸುಶೀಲಪ್ಪ ದತ್ತಿ ಪುರಸ್ಕಾರ.* 

ರಾಜ್ಯದ ಬುಡಕಟ್ಟು ಮಕ್ಕಳ ಶ್ರೇಯೋಭಿವೃದ್ಧಿಗೆ, ಬುಡಕಟ್ಟು ಕಲೆ, ಸಾಹಿತ್ಯ ಪರಂಪರೆಯ  ಪುನರುಜ್ಜೀವನಕ್ಕೆ ಶ್ರಮಿಸಿದವರಿಗೆ ಈ ಪುರಸ್ಕಾರ ಮೀಸಲು. ತಮ್ಮ ಸೇವೆಯ ಸಂಬಂಧಿತ ದಾಖಲೆಗಳನ್ನು ಪಿಡಿಎಫ್ ನಲ್ಲಿ  ಇ-ಮೇಲ್ ಮಾಡಬಹುದು.


5. *ಮಕ್ಕಳ ಮಂದಾರ ಗೌರವ ಪುರಸ್ಕಾರ.* 

  ಈ ಪುರಸ್ಕಾರ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಮಕ್ಕಳ  ಸಾಹಿತ್ಯ, ಪ್ರಕಾಶನ, ಶಾಲಾ  ಶೈಕ್ಷಣಿಕ ಸೇವೆಯಲ್ಲಿನ ಸೂಕ್ತ ವ್ಯಕ್ತಿಗಳಿಗೆ ಮಾತ್ರ  ಆಗಿರುತ್ತದೆ.

ಮಕ್ಕಳ ಶಿಕ್ಷಣದಲ್ಲಿ ನಾವಿನ್ಯ ಪ್ರಯೋಗ ಮಾಡಿದ ಶಿಕ್ಷಕರು , ಮಕ್ಕಳ ಶಿಕ್ಷಣಕ್ಕೆ ಹಾಗೂ ಸರ್ಕಾರಿ ಶಾಲಾ ಸಬಲಿಕರಣಕ್ಕೆ ಶ್ರಮಿಸಿದವರು, ಮಕ್ಕಳ ಹಕ್ಕುಗಳ ಹೋರಾಟಗಾರರ ಜೀವಮಾನದ ಸಾಧನೆಗೆ
ಮಕ್ಕಳ ಮಂದಾರ" ಗೌರವ ಪುರಸ್ಕಾರ ಮೀಸಲಾಗಿದೆ.

ಅಂತಹ ಸಾಧಕರ ವಿವರಗಳನ್ನು ಸೂಕ್ತ ಲಗತ್ತುಗಳೊಂದಿಗೆ  ಪಿಡಿಎಫ್ ಫೈಲ್ ಜೊತೆಗೆ ಯಾರಾದರೂ ನಾಮನಿರ್ದೇಶನ ಮಾಡಬಹುದು. ಅಥವಾ ಸ್ವತಹ ಅಭ್ಯರ್ಥಿಯೆ ಅರ್ಜಿ ಸಲ್ಲಿಸಬಹುದು.

 *ರಾಜ್ಯ ಪ್ರಶಸ್ತಿಗಳು ನಗದು ಪುರಸ್ಕಾರ, ಸನ್ಮಾನ ಪತ್ರವನ್ನು ಒಳಗೊಂಡಿರುತ್ತದೆ.* 

 *ಗೌರವ ಪುರಸ್ಕಾರಗಳು ಸನ್ಮಾನ ಹಾಗೂ ಸನ್ಮಾನ ಪತ್ರ ಫಲಕ ಒಳಗೊಂಡಿರುತ್ತದೆ.* 

 ಸಾಹಿತ್ಯ ಕೃತಿಗಳ  ವಿಭಾಗಕ್ಕೆ ಅರ್ಜಿ ಸಲ್ಲಿಸುವವರು
21 ನೇ ಸಾಲಿನ ಯಾವುದೇ ರೀತಿಯ ಮಕ್ಕಳ ಸಾಹಿತ್ಯ ಕೃತಿಗಳ ಎರಡು ಪ್ರತಿಗಳನ್ನು ಕಳುಹಿಸಬೇಕು.

ಪ್ರಶಸ್ತಿ ಪುರಸ್ಕೃತರ ಸಂಖ್ಯೆಯನ್ನು  ದತ್ತಿ ಪ್ರಾಯೋಜಕರು ನಿರ್ಧರಿಸುತ್ತಾರೆ. 

ಪ್ರಶಸ್ತಿ ಕುರಿತು ಯಾವುದೇ ಬದಲಾವಣೆ, ನಿಲುವುಗಳಲ್ಲಿ ಸಮಿತಿಯ ತೀರ್ಮಾನವೇ ಅಂತಿಮ.

 *ತಮ್ಮ ನಾಮನಿರ್ದೇಶನ ಪ್ರಸ್ತಾವನೆ ,ಕೃತಿಗಳನ್ನು ಕಳಿಸಲು ಕೊನೆಯ ದಿನ ಮಾರ್ಚ್  30.2022* 

ಸೂಕ್ತ ದಾಖಲೆಗಳೊಂದಿಗೆ ತಮ್ಮ ಸೇವೆಯ ವಿವರಗಳನ್ನು ಕಳಿಸಬೇಕಾದ ಈಮೇಲ್
Makkalamandara@Gmail.com.

 *ಮಾಹಿತಿಗೆ ಕರೆ ಮಾಡಿ* - 9980952630

*********************
 *ಪ್ರಕಟಣೆ


ರವೀಂದ್ರ .ಆರ್.
ಅಧ್ಯಕ್ಷರು.
ಸೃಜನ ಶಿಕ್ಷಣ ಸಂಶೋಧನಾ ಟ್ರಸ್ಟ್.(ರಿ)



 *ಕೃತಿಗಳನ್ನು ಕಳುಹಿಸಬೇಕಾದ ವಿಳಾಸ* 

ಜಿಲ್ಲಾಧ್ಯಕ್ಷರು
ಕರ್ನಾಟಕ ರಾಜ್ಯ  ಮಕ್ಕಳ ಸಾಹಿತ್ಯ ಪರಿಷತ್ತು

ಚೌಡೇಶ್ವರಿ ನಿಲಯ
ಮಂಡಗಳಲೆ
ಕಾನಲೇ ಪೋಸ್ಟ್.
ಸಾಗರ ತಾಲೂಕು
ಶಿವಮೊಗ್ಗ ಜಿಲ್ಲೆ  -577430
ದೂರವಾಣಿ.
ವಾಟ್ಸಾಪ್- 9980952630.


ನಿಮ್ಮ 
ರವಿರಾಜ್ ಸಾಗರ್.
ಜಿಲ್ಲಾಧ್ಯಕ್ಷರು ಶಿವಮೊಗ್ಗ.

ಎಪಿಗ್ರಾಫಿಯಾ ಕರ್ನಾಟಕ ಎಲ್ಲ ಶಾಸನಗಳನ್ನು ಈ ಲಿಂಕ್ ಅಲ್ಲಿ ಓದಿ

ಈ ಟೆಕ್ಸ್ಟ್ ಕ್ಲಿಕ್ ಮಾಡಿ ಲಿಂಕ್ ಪಡೆಯಿರಿ ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಕರ್ನಾಟಕ ಎಪಿಗ್ರಾಫಿಯಾ ಎಲ್ಲ ಸಂಪುಟಗಳನ್ನು ಉಚಿತವಾಗಿ ಓದಿ..